ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ನವರಾತ್ರಿ ಸಂಭ್ರಮ – ವಿಜೃಂಭಣೆಯಿಂದ ನಡೆದ “ಮಹಾನವಮಿ ರಥೋತ್ಸವ”

0
9

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here


ಕುಂದಾಪುರ :ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ. 20ರಂದು ಬೆಳಗ್ಗೆ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ಶ್ರೀ ಮೂಕಾಂಬಿಕಾ ದೇವಿಯ ಮಹಾನವಮಿ ರಥೋತ್ಸವ ಜರಗಿತು.
ಅ. 20ರಂದು ಬೆಳಗ್ಗೆ ದೇಗುಲದ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿಗಳ ಬಳಿಕ ಶ್ರೀ ದೇವಿಯ ಉತ್ಸವ ಮೂರ್ತಿಯ ಪ್ರದಕ್ಷಿಣೆ, ಬಲಿಸೇವೆ ನಡೆಯಿತು. ಅನಂತರ ಅಲಂಕಾರಗೊಂಡ ಪುಷ್ಪರಥದಲ್ಲಿ ಶ್ರೀ ದೇವಿಯನ್ನು ಕುಳ್ಳಿರಿಸಿ ಭಕ್ತರು ದೇಗುಲದ ಒಳಪ್ರಾಂಗಣದಲ್ಲಿ ಒಂದು ಸುತ್ತು ರಥವನ್ನು ಎಳೆದರು. ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ., ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾ‌ರ್ ಶೆಟ್ಟಿ ಸಮಿತಿ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here