ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಬ್ರಹ್ಮಾವರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಐದನೇಯ ಸಾಹಿತ್ಯ ಸಮ್ಮೇಳನವು ಅಕ್ಟೋಬರ್ 4ರಂದು ಸಾಸ್ತಾನದ ಶಿವಕೃಪಾ ಸಭಾ ಭವನದಲ್ಲಿ ನಡೆಯಲಿದ್ದು ಅಕ್ಟೊಬರ್ 2ಭಾನುವಾರ ಸಮ್ಮೇಳನದ ಆಶಯ ಗೀತೆ ಬಿಡುಗಡೆ ಕಾರ್ಯಕ್ರಮ ಸಾಸ್ತಾನದ ಶಿವಕೃಪಾ ಸಭಾ ಭವನದಲ್ಲಿ ನಡೆಯಿತು.
ಆಶಯ ಗೀತೆ ಬಿಡುಗಡೆ ಮಾಡಿದ ಸಮ್ಮೇಳನದ ಗೌರವಾಧ್ಯಕ್ಷ ಆನಂದ ಸಿ ಕುಂದರ್ ಮಾತನಾಡಿ ಸಮ್ಮೇಳನದ ಅಧ್ಯಕ್ಷರಾಗಿ ನರೇಂದ್ರ ಕುಮಾರ್ ಕೋಟ ಆಯ್ಕೆಯಾಗಿರುವುದು ಸಮ್ಮೇಳನಕ್ಕೆ ಮೆರಗು ತಂದಿದೆ. ನರೇಂದ್ರ ಕುಮಾರ್ ಸಾಹಿತ್ಯಕ್ಕೆ ಹೊಸ ಹೊಸ ಪ್ರತಿಭೆಗಳನ್ನು ವೇದಿಕೆ ತಂದು ಬೆಳೆಸಿದವರು ಖಂಡಿತ ಕಾರ್ಯಕ್ರಮ ಯಶಸ್ಸು ಕಾಣುತ್ತದೆ ಎಂದರು.
ಧಾರ್ಮಿಕ ಚಿಂತಕರಾದ ಡಾ. ವಿಜಯ ಮಂಜರವರು ಮಾತನಾಡಿ ಕಾರ್ಯಕ್ರಮ ಯಶಸ್ಸಿಗೆ ನಾವೆಲ್ಲಾ ಕೈ ಜೋಡಿಸುತ್ತೇವೆ. ನರೇಂದ್ರ ಕುಮಾರ್ ಸಮ್ಮೇಳನ ಅಧ್ಯಕ್ಷರಾಗಿರುವುದು ನನಗೆ ವೈಯಕ್ತಿಕವಾಗಿ ಸಂತೋಷವಾಗಿದೆ. ನಮ್ಮ ಭಾಗದ ಅನೇಕರಿಗೆ ನರೇಂದ್ರ ರವರು ಎಲ್ಲ ರೀತಿಯಲ್ಲೂ ಗುರುವಾಗಿ ಗುರಿ ತೋರಿದವರು ಎಂದರು.
ಜಿಲ್ಲಾ ಕಾರ್ಯದರ್ಶಿ ಸುಬ್ರಮಣ್ಯ ಶೆಟ್ಟಿ ಮಾತನಾಡಿ ನರೇಂದ್ರ ಕುಮಾರ್ ರವರ ಅಧ್ಯಕ್ಷತೆ ಸಾಹಿತ್ಯ ಸಮ್ಮೇಳಕ್ಕೆ ಹೊಸ ಹವಾ ಸೃಷ್ಟಿಯಾಗಿದೆ.ಹೆಚ್ಚಿನ ಸಾಹಿತ್ಯ ಆಸಕ್ತರು ಬರುವ ನಿರೀಕ್ಷೆ ಇದೆ ಎಂದರು
ತಾಲ್ಲೂಕು ಸಂಘದ ಅಧ್ಯಕ್ಷ ರಾಮಚಂದ್ರ ಐತಾಳ್ ಕಾರ್ಯಕ್ರಮದ ಆಯೋಜನೆ ರೂಪು ರೇಷೆಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ರತ್ನಾ ಜೆ ರಾಜ್ ಸಾಸ್ತಾನ,ಅಚ್ಚುತ ಪೂಜಾರಿ,ರಘು ಮಧ್ಯಸ್ಥ,ರತ್ನಾ ಜೆ. ರಾವ್,ಪ್ರತಾಪ ಶೆಟ್ಟಿ,ಮನೋಜ್ ಕುಮಾರ್,ಸುಬ್ರಾಯ್ ಆಚಾರ್,ಗಣೇಶ ಜಿ,ಕುಸುಮ ಮನೋಜ್,ಶಿವಾನಂದ ಅಡಿಗ,ಪ್ರಕಾಶ ಪೂಜಾರಿ,ಸುರೇಶ ಪೂಜಾರಿ,ಮಹಾಲಕ್ಷ್ಮೀ ಸೋಮಯಾಜಿ,ಸುಮನಾ ಹೇರ್ಳೆ,ಭಾಸ್ಕರ ಪೂಜಾರಿ,ರವಿ ಎಸ್ ಪೂಜಾರಿ,ಲೀಲಾವತಿ ಗಂಗಾಧರ್
ಮಾರುತಿ ಕೆ.ಪಿ.ಸುರೇಶ ಕಾರ್ಕಡ, ಮತ್ತಿತರರು ಉಪಸ್ಥಿತರಿದ್ದರು
ಜಿಲ್ಲಾ ಸಂಘಟನ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ಪ್ರಾಸ್ತಾವಿಸಿ,ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದ ಕಾರ್ಯದರ್ಶಿ ಜ್ಯೋತಿ ಪೂಜಾರಿ ಸ್ವಾಗತಿಸಿ,ಕೋಶಧಿಕಾರಿ ಅಲ್ತಾರು ನಾಗರಾಜ್ ನಿರೂಪಿಸಿ ವಂದಿಸಿದರು.












