ಕಾರ್ಕಡ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತ ಮಂಡಳಿ ರಚನೆ – ಅಧ್ಯಕ್ಷರಾಗಿ ಬಾಲಕೃಷ್ಣ ನಕ್ಷತ್ರಿ ಆಯ್ಕೆ

0
6

Click Here

Click Here

ಕುಂದಾಪುರ ಮಿರರ್ ಸುದ್ದಿ…

​ಕುಂದಾಪುರ: ಇಲ್ಲಿನ ಕಾರ್ಕಡ ಗ್ರಾಮದ ಮೂಡೋಳಿಯ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯು ದಿನಾಂಕ ಸೆ.27ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು.
​ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವೇದಮೂರ್ತಿ ಬಾಲಕೃಷ್ಣ ನಕ್ಷತ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
​ಇತರ ಪದಾಧಿಕಾರಿಗಳಾಗಿ ​ಉಪಾಧ್ಯಕ್ಷರಾಗಿ ಕೆ. ಶಶಿಧರ ಮಯ್ಯ
​ಕಾರ್ಯದರ್ಶಿಯಾಗಿ ಕೆ. ನಾಗರಾಜ ಮಧ್ಯಸ್ಥ , ಸಹ ಕಾರ್ಯದರ್ಶಿಯಾಗಿ ರಮೇಶ ನಕ್ಷತ್ರಿ, ​ಖಜಾಂಚಿ ಕೆ. ಲಕ್ಷ್ಮಣ ನಕ್ಷತ್ರಿ, ​ಸದಸ್ಯರಾಗಿ ಕೆ. ಚಂದ್ರಶೇಖರ ಸೋಮಯಾಜಿ, ಕೆ. ಸೀತಾರಾಮ ಸೋಮಯಾಜಿ, ಕೆ. ರಘುರಾಮ ಹೊಳ್ಳ, ಕೆ. ಬಾಬು, ಲಕ್ಷ್ಮಣ ಪೂಜಾರಿ ಹಾಗೂ ಕೆ. ರಾಮ ಅವರು ನೂತನ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
​ಹಂಗಾಮಿ ಸಭಾ ಅಧ್ಯಕ್ಷರಾಗಿ ಕೆ. ಸುಬ್ರಹ್ಮಣ್ಯ ಹೆಬ್ಬಾರ್‌ ಅವರು ಸಭೆಯನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಮುಂಬರುವ ನವರಾತ್ರಿ ಉತ್ಸವದ ಬಗ್ಗೆ ಚರ್ಚೆ ನಡೆಸಲಾಯಿತು. ಸಹಕಾರ್ಯದರ್ಶಿ ರಮೇಶ ನಕ್ಷತ್ರಿ ಧನ್ಯವಾದ ಸಲ್ಲಿಸಿದರು.

Click Here

Click Here

LEAVE A REPLY

Please enter your comment!
Please enter your name here