ವಕ್ವಾಡಿ :ಗುರುಕುಲ ಗೋಕುಲಂ ಸದ್ಮನದಲ್ಲಿ ಭಜನೆಯ ಭಕ್ತಿಸುಧೆ

0
9

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕೋಟೇಶ್ವರ :ಗುರುಕುಲ ಗೋಕುಲಂ ಸದ್ಮನ- ಗೋಶಾಲೆಯಲ್ಲಿ ದೀಪಾವಳಿಯ ಪ್ರಯುಕ್ತ ಭಜನಾ ಭಕ್ತಿ ಸುಧೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಬಸ್ರೂರು ಇದರ ಅಧ್ಯಕ್ಷರೂ, ಶ್ರೀ ಧರ್ಮಸ್ಥಳ ಭಜನಾ ಪರಿಷತ್ತಿನ ಉಪಾಧ್ಯಕ್ಷರು ಆದ ಶ್ರೀ ರಾಜೇಂದ್ರ ಕುಮಾರ್ ಹಾಗೂ ಅವರ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸುಂದರವಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಹಾಡುಗಾರಿಕೆಯಲ್ಲಿ ಶ್ರೀ ರಾಜೇಂದ್ರ ಕುಮಾರ್ ಹಾಗೂ ಕುಮಾರಿ ರಿಧಿಮ ಕಚೇರಿ ನಡೆಸಿಕೊಟ್ಟರು. ಶ್ರೀರಾಮಕೃಷ್ಣ ಆಚಾರ್ಯ ತಬಲಾದಲ್ಲಿ, ಶ್ರೀ ಗೋರಕನಾಥ್ ತಾಳದಲ್ಲಿ ಸಹಕರಿಸಿದರು. ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮಾ ಎಸ್ ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ನಾಯ್ಕ್ ಉಪಸ್ಥಿತರಿದ್ದರು. ಶಿಕ್ಷರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು. ವಿಜಯಲಕ್ಷ್ಮಿ ನಿರೂಪಿಸಿ, ವಂದಿಸಿದರು.

Click Here

LEAVE A REPLY

Please enter your comment!
Please enter your name here