ಕುಂದಾಪುರ ಮಿರರ್ ಸುದ್ದಿ…
ಕೋಟ: ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ಹರಕೆಯ ಮಣೂರು ಕಂಬಳ ಮಹೋತ್ಸವ ಭಾನುವಾರ ಸಂಪನ್ನಗೊಂಡಿತು.
ಪ್ರತಿವರ್ಷದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಕಂಬಳದ ಕೋಣಗಳು ಆಗಮಿಸಿ ತಮ್ಮ ಹರಕೆಯನ್ನು ಸಂದಾಯಗೊಳಿಸಿಕೊಂಡರು.
ಪ್ರಾರಂಭದಲ್ಲಿ ಮಳಲುತಾಯಿ ದುರ್ಗಾಪರಮೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಕಂಬಳದ ಮನೆತನವಾದ ರಘುರಾಮ ಶೆಟ್ಟಿ ಇವರ ಮನೆಯಲ್ಲಿ ಕೆಲ ಶಾಸ್ತ್ರಗಳನ್ನು ಪೂರೈಸಿಕೊಂಡು ಕಂಬಳಕ್ಕೆ ಚಾಲನೆ ನೀಡಲಾಯಿತು.
ಮತ್ತೆ ಹಂದೆ ಮನೆತನ ಸದ್ದು
ಕಂಬಳದಲ್ಲಿ ಹಂದೆ ಮನೆತನದ ಕೋಣಗಳಿಲ್ಲದಿದ್ದರೆ ಮೆರುಗು ಬಲು ಕಡಿಮೆ ಆದರೆ ಕಳೆದ ನಾಲ್ಕಾರು ವರ್ಷಗಳಿಂದ ಹಂದಟ್ಟು ಹಂದೆ ಮನೆತನದ ಕಂಬಳದ ಕೋಣಗಳು ಕಂಬಳದಿಂದ ಹೊರಗುಳಿದಿದ್ದರು. ಆದರೆ ಇದೀಗ ಮತ್ತೆ ಜಗತ್ ಹಂದೆ ಮನೆತನದ ಕೋಣಗಳು ಮೇಳೈಸಿದ್ದು ನೆರೆದಿದ್ದ ಅಭಿಮಾನಿಗಳನ್ನು ಪುಳಕಿತಗೊಳಿಸಿತು. ಅದರಂತೆ ಕಂಬಳಗದ್ದೆ ಮನೆತನ, ಗಾಡಿ ಕೂಸಣ್ಣ ಗಿಳಿಯಾರು ಬೋಜ ಪೂಜಾರಿ, ಹಂಡಿಕೆರೆ ಮನೆತನ, ತೆಕ್ಕಟ್ಟೆ ಮೇಲ್ಮನೆ
ಹಂಡಿಕೆರೆ ಕೋಟ ಪಡುಕರೆ ಶೀನ ಶಿವ ಪೂಜಾರಿ, ಶ್ರೀನಿಧಿ ಮನೆ ಮಣೂರು, ರಿಜ್ವಾನ್ ಬ್ಯಾರಿ ಕೋಣಗಳು ಕಂಬಳದಲ್ಲಿ ಭಾಗಿಯಾದವು.
ಸಾವಿರಾರು ಜನ ಭಾಗಿ
ಸಂಪ್ರದಾಯಕ ಕಂಬಳವಾದರೂ ಸುಮಾರು ಮೂರು ಎಕ್ಕರೆ ವಿಸ್ತೀರ್ಣ ಹೊಂದಿದ ಮಣೂರು ಕಂಬಳ ಗದ್ದೆಯಲ್ಲಿ ಸಾವಿರಾರು ಜನ ಸೇರಿದ್ದು ವಿಶೇಷವಾಗಿತ್ತು ಚಂಡೆ,ಡೋಲುವಾದನ ನಡುವೆ ಸಮಾರು 25ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳದಲ್ಲಿ ತಮ್ಮ ಹರಕೆಯನ್ನು ಸಂದಾಯಗೊಳಿಸಿದರು.












