ಬೆಳಗಾವಿ ಜಿಲ್ಲಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ‌ ಜಯಶೀಲ ಎನ್. ಶೆಟ್ಟಿ ಘಟಪ್ರಭಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಉಳ್ತೂರು ಸಂತೋಷ್ ಶೆಟ್ಟಿ ಆಯ್ಕೆ

0
20

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ :ಬಂಟರ ಭವನ ಬೆಳಗಾವಿಯಲ್ಲಿ ನಡೆದ ಸಂಘದ 42ನೇ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಬಂಟರ ಸಂಘದ ನೂತನ ಅಧ್ಯಕ್ಷರು ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ನೂತನ ಅಧ್ಯಕ್ಷರಾಗಿ ಜಯಶೀಲ ಎನ್. ಶೆಟ್ಟಿ ಘಟಪ್ರಭಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಉಳ್ತೂರು ಸಂತೋಷ್ ಶೆಟ್ಟಿಯವರನ್ನು ಸರ್ವಾನುಮತದಿಂದ ಮುಂದಿನ ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘದ ಸ್ಥಾಪಕಾಧ್ಯಕ್ಷರು ಹಿರಿಯರು, ಗೌರವಾಧ್ಯಕ್ಷರಾದ ವಿಠಲ್ ಎಸ್. ಹೆಗ್ಡೆ ಯವರು ಮತ್ತು ಸಂಘದ ನಿಕಟಪೂರ್ವ ಅಧ್ಯಕ್ಷರು ವಿಜಯ್ ಎಂ ಶೆಟ್ಟಿ ಮತ್ತು ಮಾಜಿ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಹಿಡ್ಕಲ್, ಮಾಜಿ ಅಧ್ಯಕ್ಷರು ಚಂದ್ರಶೇಖರ್ ಶೆಟ್ಟಿ ಮಾಜಿ ಪ್ರಧಾನ ಕಾರ್ಯದರ್ಶಿಯವರಾದ ಚೇತನ್ ಶೆಟ್ಟಿ, ಮಾಜಿ ಖಜಾಂಚಿವರಾದ ಪ್ರಣಯ ಆರ್ ಶೆಟ್ಟಿ, ಮಾಜಿ ಸಂಘಟನಾ ಕಾರ್ಯದರ್ಶಿ ಪ್ರಭಾಕರ್ ಶೆಟ್ಟಿ, ಹಿರಿಯ ಸದಸ್ಯರಾದ ಬಾರ್ಕೂರ್ ನಡುಮನೆ ಜಯರಾಮ್ ಶೆಟ್ಟಿ, ಮಾಜಿ ಎಸ್ಪಿ ಜೆ.ಎಂ.ಕರುಣಾಕರ್ ಶೆಟ್ಟಿ, ಯರಗಟ್ಟಿ ರತ್ನಾಕರ್ ಶೆಟ್ಟಿ, ಉದಯ್ ಶೆಟ್ಟಿ ಕ್ಯುನಿಕ್ಸ್, ಗೋಪಿನಾಥ್ ವಿ ಹೆಗ್ಡೆ, ಸುರೇಶ್ ವಿ ಶೆಟ್ಟಿ, ಶ್ರೀಧರ್ ಶೆಟ್ಟಿ, ಅಡ್ವಕೇಟ್ ರವೀಂದ್ರ ಎನ್ ಶೆಟ್ಟಿ, ಅಡ್ವಕೇಟ್ ಪ್ರಭಾಕರ್ ಶೆಟ್ಟಿ ಮತ್ತು ಹಿರಿಯ ಪದಾಧಿಕಾರಿಗಳು ಹಾಗೂ ಬೆಳಗಾವಿ ಜಿಲ್ಲೆಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here