ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಹಿರಿಯ.ಪ್ರಾಥಮಿಕ ಶಾಲೆ ಹಂಗಾರಕಟ್ಟೆ ಶಾಲಾ ವಿದ್ಯಾರ್ಥಿ ತನುಶ್ರೀ ಮತ್ತು ಪ್ರತಿಕ್ಷ ಇವರು ತಯಾರಿಸಿದ ಮಾದರಿ ಮೀನುಗಾರಿಕೆಯಲ್ಲಿ ವಿದ್ಯುತ್ತನ್ನು ಉಪ್ಪು ನೀರಿನಿಂದ ತಯಾರಿಸುವುದು ಸಿಂಧುವಿಗೆ ಜಲದಿಂದ ವಿದ್ಯುತ್ ಉತ್ಪಾದನೆ ಎನ್ನುವ ವಿಜ್ಞಾನ ಯೋಜನೆಯ 30ನೇ ಅಖಿಲ ಕರ್ನಾಟಕ ಮಕ್ಕಳ ವಿಜ್ಞಾನ ಸಮಾವೇಶ 2022-23 ಇದರ ಉಡುಪಿ ಜಿಲ್ಲಾ ಮಟ್ಟ ಸ್ಪರ್ಧೆಯಲ್ಲಿ ಮಂಡನೆಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಹಾಗೂ ಪ್ರತೀಕ್ ಭವಿಷ್ಯ ಎನ್ನುವ ಇರ್ವರು ವಿದ್ಯಾರ್ಥಿಗಳು ಜಿಜ್ಞಾಸ ವಿಜ್ಞಾನ ವಿಭಾಗ ಮಾದರಿ ಸ್ಪರ್ಧೆಯಲ್ಲೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಇವರಿಗೆ ಶಾಲೆಯ ವಿಜ್ಞಾನ ಶಿಕ್ಷಕಿ ವೀಣಾ ಮಾರ್ಗದರ್ಶನ ನೀಡಿದ್ದಾರೆ ಇವರು ಮಾಡಿರುವ ಬ್ರಾಹ್ಮಿ ಸಾರ್ವಕಾಲಿಕ ಪತ್ರ ಎನ್ನುವ ಯೋಜನೆ 2022 23 ಡ್ರಾ ವಿಭಾಗ ಮಟ್ಟದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.











