ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸ್ವರಾಜ್ಯ ೭೫” ತಂಡದ ಹೊಂಬೆಳಕು ಇದು ಸ್ವಾತಂತ್ರ್ಯದ ಹಣತೆ ಎಂಬ ಅಡಿ ಬರಹದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಥಳ ಗುರುತಿಸುವ ಕಾರ್ಯವಾಗಿ 23 ಸ್ಥಳವಾಗಿ ಕಡಲತಡಿಯ ಭಾಗ ಎಂದೇ ಜನ ಮನ್ನಣೆ ಪಡೆದಿರುವ ಡಾ.ಕೋಟ ಶಿವರಾಮ ಕಾರಂತ ಥಿಮ್ ಪಾರ್ಕನಲ್ಲಿ ನಾಮಫಲಕ ವನ್ನು ಹಿರಿಯ ಪರಿಸರವಾದಿ ಗುರುತಿಸಿಕೊಂಡಿರುವ ಕೋಟ ಗಿರೀಶ್ ನಾಯಕ್ ಇವರಿಂದ ಅನಾವರಣ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಅನೀತಾ ನರೇಂದ್ರ ಕುಮಾರ್ ಕೋಟ ಇವರು ರಾಷ್ಟ್ರ ಧ್ವಜಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕರಾವಳಿಗರ ಕೊಡುಗೆ ಇದರೊಂದಿಗೆ ಕೋಟ ಶಿವರಾಮ ಕಾರಂತರ ಸೇವೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಪ್ರೋ ಟಿ.ಮುರುಗೇಶ್ ಇವರು ವಿಚಾರ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ ಅಶ್ವಿನಿ ದಿನೇಶ್ ವಹಿಸಿದ್ಧರು. ಶರಧಿ ಇವರು ಕೋಟ ಶಿವರಾಮ ಕಾರಂತರ ಚಿತ್ರ ಬಿಡಿಸುವುದರ ಮೂಲಕ ಜನ ಮನ ಗೆದ್ದರು.
ಗಣ್ಯರಾಗಿ ರಾಮಚಂದ್ರ ಐತಾಳ್, ವಾಸು ಪೂಜಾರಿ, ಸುಬ್ರಾಯ ಆಚಾರ್ಯ ಕೋಟ, ಶ್ವೇತ ಉಲ್ಲಾಸ್, ಸುಬ್ರಹ್ಮಣ್ಯ ಶೆಟ್ಟಿ, ಪ್ರಸಾದ್ ಬಿಲ್ಲವ ವೇದಿಕೆ ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ದಲ್ಲಿ ಸ್ಥಳೀಯವಾಗಿ ಜನಸೇವಾ ಟ್ರಸ್ಟ್(ರಿ) ಮೂಡುಗಿಳಿಯಾರು,ಹಸ್ತ ಚಿತ್ತ ಫೌಂಡೇಶನ್, ವಕ್ವಾಡಿ, ಉಸಿರು ಕೋಟ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಬ್ರಹ್ಮಾವರ ತಾಲೂಕು ಘಟಕ, ಭಗತ್ ಸಿಂಗ್ ಯುವ ವೇದಿಕೆ(ರಿ)ಕೋಟ,ರಾಷ್ಟ್ರೀಯ ಸೇವಾ ಯೋಜನಾ ಘಟಕ ಕಾಳಾವರ ವರದರಾಜ ಎಮ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಪೋಸ್ಟ ಇವರ ಸಹಕಾರದಿಂದ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಥೀಮ್ ಪಾರ್ಕ್ ನ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಸಂತೋಷ್ ಕುಮಾರ್ ,ಚಂದನ್ ಗೌಡ, ಶಂಕರ್ ಮೂತಿ೯ ಮಂಜ, ಪ್ರಶಾಂತ್ ಕೋಟ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಕುಮಾರಿ ನವ್ಯ ಕುಂದಾಪುರ ,ಪ್ರಾಸ್ತಾವಿಕ ವನ್ನು ಸ್ವರಾಜ್ಯ ೭೫ ಕಾರ್ಯಕ್ರಮದ ಸಂಚಾಲಕರು ಪ್ರದೀಪ ಕುಮಾರ್ ಬಸ್ರೂರು ವಿಚಾರ ಹಂಚಿಕೊಂಡರು. ಧನ್ಯವಾದ ವನ್ನು ಅಕ್ಷತಾ ಗಿರೀಶ್ ಐತಾಳ್ ನಡೆಸಿದರು











