ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ – ಸಂಸ್ಕೃತ ಸಂಘ ಉದ್ಘಾಟನೆ

0
424

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಂಸ್ಕೃತ ಭಾಷೆ ಭಾರತದ ಅತ್ಯಂತ ಹಳೆಯ ಭಾಷೆಯಾಗಿದ್ದು, ಭಾರತೀಯ ಸಂಸ್ಕೃತಿ ಪರಂಪರೆಯ ಸಂಕೇತವಾಗಿದೆ. ಈ ಭಾಷೆ ಹಲವು ಭಾಷೆಗಳ ತಾಯಿ. ಇದನ್ನು ಸಾಮಾನ್ಯ ಜನರ ಮುಂದೆ ತರಬೇಕು. ಇಂಗ್ಲೀಷ್ ಪದಗಳು ಸಂಸ್ಕøತದ ಹಲವು ಪದಗಳಿಂದ ರೂಪುಗೊಂಡಿದೆ. ಹಾಗೇಯೇ ಭಾಷೆ ಕಲಿಯುವ ಅಗತ್ಯತೆಯ ಕುರಿತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸಂಸ್ಕøತ ಉಪನ್ಯಾಸಕರಾದ ವಿದ್ವಾನ್ ವೆಂಕಟೇಶ್ ಮೂರ್ತಿ ಅವರು ಹೇಳಿದರು.

ಅವರು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಂಸ್ಕೃತ ಸಂಘ ಉದ್ಘಾಟಿಸಿ ಮಾತನಾಡಿದರು.

Click Here

ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಉಪಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ ಪ್ರಸ್ತಾವಿಸಿದರು. ಸಂಸ್ಕೃತ ಸಂಘದ ಸಂಯೋಜಕರು ಹಾಗೂ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಗಣೇಶ್ ಭಟ್‍ರವರು ಅತಿಥಿಗಳನ್ನು ಪರಿಚಯಿಸಿದರು. ಸಂಸ್ಕೃತ ಸಂಘದ ಸಹ ಸಂಯೋಜಕಿ ಶ್ವೇತಾ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ವಿಜೇತ ಸ್ವಾಗತಿಸಿ, ಪೂಜಾ ವಂದಿಸಿ, ಸೌಭಾಗ್ಯ ಕಿಣಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here