ಕುಂದಾಪುರ :ಕೊಲ್ಲೂರಿಗೆ ತೆರಳಿದ ನೂತನ ಬ್ರಹ್ಮರಥ

0
979

Click Here

Click Here

ಕುಂದಾಪುರ ಮಿರರ್ ‌ಸುದ್ದಿ…

ಕುಂದಾಪುರ :400 ವರ್ಷಗಳ ಬಳಿಕ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ತಾನಕ್ಕೆ ನೂತನ ರಥ ನಿರ್ಮಾಣಗೊಂಡಿದೆ. ಉದ್ಯಮಿ ದಿ.ಆರ್.ಎನ್.ಶೆಟ್ಟಿ ಅವರ ಪುತ್ರ ಸುನಿಲ್ ಆರ್.ಶೆಟ್ಟಿ ಅವರು ಈ ಬ್ರಹ್ಮರಥವನ್ನು ಸೇವಾರೂಪದಲ್ಲಿ ನಿರ್ಮಿಸಿಕೊಟ್ಟಿದ್ದು ಮೊದಲಿನ ರಥದ ಮಾದರಿಯಲ್ಲೇ ನೂತನ ರಥ ಕುಂಭಾಸಿಯ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದಲ್ಲಿ ರಥವನ್ನು ನಿರ್ಮಿಸಲಾಗಿದ್ದು, ಫೆ.16ರಂದು ಮೂಕಾಂಬಿಕೆಗೆ ಬ್ರಹ್ಮರಥ ಸಮರ್ಪಣೆಯಾಗಲಿದೆ.

Click Here

ಆ ಪ್ರಯುಕ್ತ ಫೆ.15ರಂದು ಕೋಟೇಶ್ವರದಲ್ಲಿ ಪುರ ಪ್ರವೇಶಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ತಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಶೇಟ್ಟಿ ಕೆರಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಶೇಖರ ಆಚಾರ್ಯ, ವಿವಿಧ ದೇವಸ್ಥಾನಗಳ ಪ್ರಮುಖರು ಉಪಸ್ಥಿತರಿದ್ದರು.
ನೂತನ ಬ್ರಹ್ಮರಥವನ್ನು ಕುಂದಾಪುರ ಮಾರ್ಗದುದ್ದಕ್ಕೂ ದೇವಸ್ಥಾನಗಳ ವತಿಯಿಂದ ವಾದ್ಯಘೋಷ, ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ರಥಕ್ಕೆ ಪೂಜೆ ಸಲ್ಲಿಸಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಸೇರಿದ ಕುಂದಾಪುರದ ವಿವಿಧ ದೇವಸ್ಥಾನಗಳ ಪ್ರಮುಖರು, ಸಾರ್ವಜನಿಕರು ನೂತನ ರಥಕ್ಕೆ ಹೂ ಸಮರ್ಪಿಸಿದರು.

ಫೆ.16ರಂದು ಕೊಲ್ಲೂರಿನಲ್ಲಿ ದಾನಿಗಳ ಸಮ್ಮುಖದಲ್ಲಿ ರಥ ದೇವಿಗೆ ಸಮರ್ಪಣೆಯಾಗಲಿದೆ.

Click Here

LEAVE A REPLY

Please enter your comment!
Please enter your name here