ಕುಂದಾಪುರ: ಧರ್ಮ ಸಂದೇಶವನ್ನು ಧರ್ಮಗುರುಗಳು ಅರಿತಾಗ ಜಗತ್ತು ಬೆಳಗುವುದು – ನೌಫಲ್‌ ಸಖಾಫಿ ಕಳಸ

0
268

Click Here

Click Here

Video:

ನವೀಕೃತ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆ, ಸೌಹಾರ್ದ ಸಂಗಮ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಪ್ರತಿಯೊಂದು ಧರ್ಮದಲ್ಲಿಯೂ ಇರುವ ಸಂದೇಶವಾದ ದ್ವೇಷವನ್ನು ತೊಲಗಿಸು, ಪ್ರೀತಿಯನ್ನು ಬೆಳಗಿಸು ಎನ್ನುವ ಅಂಶವನ್ನು ಆಯಾ ಧರ್ಮ ಗುರುಗಳು ಅರಿತುಕೊಳ್ಳಬೇಕು ಮತ್ತು ಅದನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು. ಆಗ ಜಗತ್ತು ಶಾಂತಿಯನ್ನು ಕಾಣುತ್ತದೆ. ಸತ್ಯದ ಅರಿವಿನೊಂದಿಗೆ ಜಗತ್ತೇ ಬೆಳಗುತ್ತದೆ ಎಂದು ದ್ಸಿಕ್ರಾ ಎಜ್ಯುಕೇಶನ್ ಸೆಂಟರ್ ಮೂಡಬಿದ್ರೆ ಇದರ ಅಧ್ಯಕ್ಷ ನೌಫಲ್ ಸಖಾಫಿ ಕಳಸ ಹೇಳಿದರು.

ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ ಬದ್ರಿಯಾ ಜುಮ್ಮಾ‌ ಮಸೀದಿ ಜನ್ಸಾಲೆ ಇದರ ನವೀಕೃತ ಮಸೀದಿಯ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ ಮತ್ತೆ ಅಂತರಾಜ್ಯ ದಫ್ ಸ್ಪರ್ಧೆ ಕಾರ್ಯಕ್ರಮದಲ್ಲಿ ಸೌಹಾರ್ದ ಭಾಷಣ ಮಾಡಿದರು.

Click Here

ಯಾವುದೇ ಧರ್ಮ ಏನು ಹೇಳುತ್ತದೆ‌ ಎನ್ನುವುದನ್ನು ಅರಿತು, ಅಧ್ಯಯನ ನಡೆಸಿ ಅದನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಕಮಲಶಿಲೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಛಾತ್ರ ಮಾತನಾಡಿ, ಎಲ್ಲಾ ಧರ್ಮಗಳ ಸಂದೇಶವೂ ಒಂದೇ ಆಗಿದೆ.‌ ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡಿದ ಎಷ್ಟೂ ಮುಸ್ಲಿಮರು, ಕ್ರೈಸ್ತರೂ ಇದ್ದಾರೆ. ಜೊತೆಯಾಗಿ ಸಾಗಿದಾಗ ಬದುಕು ಸಂಭ್ರಮಿಸುತ್ತದೆ ಎಂದರು.

ಸಂತ ಅಂತೋನಿ ಕೆರೆಕಟ್ಟೆ ಇದರ ಧರ್ಮಗುರು ಸ್ವಾಮಿ ಸುನಿಲ್ ವೇಗಸ್ ಮಾತನಾಡಿ, ಸಂದೇಶಗಳು ವೇದಿಕೆಗೆ ಸೀಮಿತವಾಗದೇ ಆಚರಣೆಯಲ್ಲಿ ಬಂದಾಗ ಸಾಮರಸ್ಯ ಸಾಧ್ಯ ಎಂದರು.

ಅಸ್ಸಯಿದ್ ಕೆ.ಎಸ್. ಅಟಕೋಳ ತಂಞಳ್ ಕುಂಬೋಳ್, ಖಾಝೀ ಝೈನುಲ್ ಉಲಾಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಸ್ಸಯಿದ್ ಜಾಫರ್ ಅಸ್ಸಖಾಪ್ ತಂಞಳ್ ಕೋಟೇಶ್ವರ ಮಸೀದಿ ಉದ್ಘಾಟನೆಯ ನೇತೃತ್ವ ವಹಿಸಿದ್ದರು.

ಬಿ.ಜೆ.ಎಂ ಜನ್ಸಾಲೆ ಇದರ ಅಧ್ಯಕ್ಷ ಜನಾಬ್ ಅಬ್ದುಲ್ ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಖತೀಬ ಅಬ್ದುಲ್ ಮಜೀದ್ ಜೌಹರಿ, ಗೌರವಾಧ್ಯಕ್ಷ ಹಾಜೀ ಉಮರ್ ಸಾಹೇಬ್, ಉದ್ಯಮಿ ಜನಾಬ್ ಅಲ್ತಾಫ್ ಹೆನ್ನಾಬೈಲು, ಉದ್ಯಮಿ ಜನಾಬ್ ಎಸ್.ಎಂ.ಇರ್ಷಾದ್, ಉದ್ಯಮಿ ಮುಸ್ತಾಕ್ ಮೇಲ್ಚಡ್ಡು, ಸಿದ್ಧಾಪುರ, ಸಿದ್ಧಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ‌ ಕುಲಾಲ್, ಮಲೆನಾಡು ಅಭಿವೃದ್ದಿ ಮಂಡಲ ಸದಸ್ಯ ಜಯರಾಂ ಭಂಡಾರಿ, ಬನಶಂಕರಿ ದೇವಸ್ಥಾನ ಉಳ್ಳೂರು 74 ಇದರ ಆಡಳಿತ ಮೊಕ್ತೇಸರ ಸಂಪಿಗೇಡಿ ಸಂಜೀವ ಶೆಟ್ಟಿ,ದುಬೈ ಉದ್ಯಮಿ ಮಹಮ್ಮದ್ ಸಾಹೇಬ್ ಕಿರಿ ಮಂಜೇಶ್ವರ, ಸುನ್ನೀ ಸಂಘಟನೆಗಳ ನಾಯಕರು ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸ್ಥಪಾಕ ಖತೀಬ್ ಅಬ್ದುಲ್ ಖಾದರ್. ಸಮಾಜ ಸೇವಕ ದಸ್ತಗೀರ್ ಕಂಡ್ಲೂರ್, ಕತಾರ್ ಉದ್ಯಮಿ ಸಿ.ಕೆ.ಫರೋಜ್ ಖಾನ್, ಸಿದ್ದಾಪುರ ಕಾಮತ್ ಹಾರ್ಡವೇರ್ ಮಾಧವ್ ಕಾಮತ್, ಹೆನ್ನಾಬೈಲು ಮಸೀದಿ ಖತೀಬರು ಮೌಲಾನಾ ಶಾ ಆಲಮ್ ರಝ್ಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಅಧ್ಯಕ್ಷ ಬಿಎಸ್ಎಫ್ ರಫಿಕ್ ಗಂಗೋಳ್ಳಿ, ಎಸ.ವೈ.ಎಸ್.ಉಡುಪಿ ಜಿಲ್ಲಾ ಅಧ್ಯಕ್ಷ ಅಡ್ವಕೇಟ್ ಹಮ್ಜತ್ ಹೆಜಮಾಡಿ, ಎಸ್.ಎಂ.ಎ. ಉಡುಪಿ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಮನ್ಸೂರ್ ಕೋಡಿ, ಉಡುಪಿ ಜಿಲ್ಲಾ ನಮ್ಮ ನಾಡು ಒಕ್ಕೂಟದ ಅಧ್ಯಕ್ಷ ಮುಷ್ತಾಕ್ ಅಹಮ್ಮದ್ ಬೆಳ್ವೆ, ಲೇಖಕ ಮುಸ್ತಾಕ್ ಹೆನ್ನಾಬೈಲು, ಶಕೀರ್ ಮಿಸ್ಬಾಹಿ, ರಜಬ್. ಅಶ್ರಫ್ ಉಪಸ್ಥಿತರಿದ್ದರು.

ಕಟ್ಟಡ ಸಮಿತಿ ಅಧ್ಯಕ್ಷ ಜನಾಬ್ ಎಂ.ಎಸ್. ಮಹಮ್ಮದ್ ಸ್ವಾಗತಿಸಿ, ಇಬ್ರಾಹಿಮ್ ಜೆ. ವಂದಿಸಿದರು.

Click Here

LEAVE A REPLY

Please enter your comment!
Please enter your name here