ಮಾ.20ರಿಂದ ಮಾ.31 ರ ತನಕ ಶ್ರೀ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ರಾಮ ದೇವರಿಗೆ ಸುವರ್ಣ ಕಿರೀಟ ಹಾಗೂ ಕವಚ ಸಮರ್ಪಣೆ, ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ, ಮಹಾ ಅನ್ನಸಂತರ್ಪಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಶ್ರೀ ರಾಮ ಮಂದಿರ ಮರವಂತೆ, ಮೀನುಗಾರರ ಸೇವಾ ಸಮಿತಿ ವತಿಯಿಂದ ರಜತ ಮಹೋತ್ಸವ, ಶ್ರೀ ದೇವರ ಪುನರ್ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶೋತ್ಸವ, ಶ್ರೀ ರಾಮ ದೇವರಿಗೆ ಸುವರ್ಣ ಕಿರೀಟ ಹಾಗೂ ಕವಚ ಸಮರ್ಪಣೆ, ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ, ಮಹಾ ಅನ್ನಸಂತರ್ಪಣೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವ ಮಾರ್ಚ್ 20ರಿಂದ ಮಾರ್ಚ್ 31ರ ತನಕ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷರಾದ ವಾಸುದೇವ ಹೇಳಿದರು.
ಅವರು ಮರವಂತೆಯ ಶ್ರೀರಾಮ ಮಂದಿರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಮಾ.21ರಿಂದ ಮಾ.24ರ ತನಕ ಶ್ರೀರಾಮ ಮಂದಿರದಲ್ಲಿ ಅಷ್ಠಬಂಧ, ಪ್ರತಿಷ್ಠಾ ಹಾಗೂ ಬ್ರಹ್ಮಕಲಶೋತ್ಸವ ಮತ್ತು ಸುವರ್ಣ ಕಿರೀಟ ಹಾಗೂ ಕವಚ ಸಮರ್ಪಣೆ ಕಾರ್ಯಕ್ರಮವು ಕೆ.ವಿದ್ವಾನ ಚಂದ್ರಶೇಖರ ಸೋಮಾಯಾಜಿ ಹಾಗೂ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ಶ್ರೀ ರಾಮಚಂದ್ರಪುರ ಮಠ ಹೊಸನಗರ ಇವರ ನೇತೃತ್ವದಲ್ಲಿ ನಡೆಯಲಿದೆ ಎಂದರು.
ಮಾ.21ರಂದು ಧಾರ್ಮಿಕ ಕಾರ್ಯಕ್ರಮಗಳ ಆರಂಭ, ಮಾ.22ರಂದು ಬೆಳಿಗ್ಗೆ 6.15ಕ್ಕೆ ಅಷ್ಠಬಂಧಪೂರ್ವಕ ಶ್ರೀ ರಾಮದೇವರ ಪುನಃಪ್ರತಿಷ್ಠೆ, ಶಿಖರ ಪ್ರತಿಷ್ಠೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 3 ಗಂಟೆಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀರಾಮ ದೇವರಿಗೆ ಸುವರ್ಣ ಕಿರೀಟ ಮತ್ತು ಕವಚ ಧಾರಣೆ, ಸಮುದ್ರ ರಾಜನಿಗೆ ಸಮುದ್ರ ಆರತಿ ಕಾರ್ಯಕ್ರಮ ನಡೆಯಲಿದೆ.
6 ಗಂಟೆಗೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ, ಧಾರ್ಮಿಕ ಚಿಂತಕರಾದ ಮೀಡಿಯಾ ಮಾಸ್ಟರ್, ಪ್ರಧಾನ ಸಂಪಾದಕರಾದ ರಾಘವೇಂದ್ರ ಎಚ್.ಎಸ್, ಪತ್ರಕರ್ತರು, ವಾಗ್ಮಿಗಳು ಆಗಿರುವ ಲಕ್ಷ್ಮೀ ರಾಜಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ ಕಾರವಾರ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪಶುವೈದ್ಯರಾದ ಡಾ.ನಾಗರಾಜ, ಮುಳುಗು ತಜ್ಞ ದಿನೇಶ ಖಾರ್ವಿ ಗಂಗೊಳ್ಳಿ, ಅಂತರಾಷ್ಟ್ರೀಯ ಯೋಗಪಟು ಧನ್ವಿ ಮರವಂತೆ ಅವರನ್ನು ಸನ್ಮಾನಿಸಲಾಗುವುದು.
ರಾತ್ರಿ 9 ಗಂಟೆಗೆ ಆದರ್ಶ ಗೋಖುಲೆ ನಿರೂಪಣೆಯ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಪುಣ್ಯ ಭೂಮಿ ಭಾರತ ನಡೆಯಲಿದೆ.
ಮಾ.23ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಬೆಳಿಗ್ಗೆ 10-30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಶ್ರೀ ರಾಮಚಂದ್ರಪುರ ಮಠ ಹೊಸನಗರ ಆಶೀರ್ವಚನ ನೀಡಲಿದ್ದಾರೆ. ವಿದ್ಯಾವಾಚ್ಛಸ್ಪತಿ ಡಾ.ಅರಳು ಮಲ್ಲಿಗೆ ಪಾರ್ಥ ಸಾರಥಿ ಧಾರ್ಮಿಕ ಚಿಂತನೆ ನೆರವೇರಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಅಪ್ಪಣ್ಣ ಹೆಗ್ಡೆ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಸಂಜೆ 5.30ಕ್ಕೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಂಜೆ 6 ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಲಕ್ಷ್ಮೀನಾರಾಯಣ ಶೇರುಗಾರ್, ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಎಸ್.ಜನಾರ್ದನ ಮರವಂತೆ, ಚಿತ್ರ ಸಾಹಿತಿ ಪ್ರಮೋದ ಮರವಂತೆ, ಮುಳುಗು ತಜ್ಞ ಈಶ್ವರ ಮಲ್ಪೆ ಅವರನ್ನು ಸನ್ಮಾನಿಸಲಾಗುವುದು.
ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಝೀ ಕನ್ನಡ ವಾಹಿನಿಯ ಮಡೆನೂರು ಮನು ಇವೆಂಟ್ಸ್ ನೇತೃತ್ವದಲ್ಲಿ ಕಾಮಿಡಿ ಕಿಲಾಡಿಗಳು, ಸರಿಗಮಪ, ಡಿ.ಕೆ.ಡಿ ಕಲಾವಿದರಿಂದ ಹಾಡು ನೃತ್ಯ, ಕಾಮಿಡಿ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಮಾ.24ರಂದು ಬೆಳಿಗ್ಗೆ 10-15ಕ್ಕೆ ಶ್ರೀರಾಮ ಭಜನಾ ದೀಪ ಸ್ಥಾಪನೆ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4.30 ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಮಾಣಿಲ ಮಠ ಮಂಗಳೂರು ಇಲ್ಲಿನ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವೇದ ವೇದಾಂಗ ಶಿಕ್ಷಣ ಚಿಂತಕಿ ಉಪನ್ಯಾಸಕಿ ಅಮೃತವರ್ಷಿಣಿ ಉಮೇಶ, ಧಾರ್ಮಿಕ ಚಿಂತಕರಾದ ಡಾ.ಆರತಿ ಬಿ.ವಿ ಧಾರ್ಮಿಕ ಚಿಂತನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮತ್ಸ್ಯೋದ್ಯಮಿ ಪಿ.ದಿನಕರ ಖಾರ್ವಿ, ಪರ್ಸಿನ ಬೋಟ್ ಮಾಲಕರು ವಸಂತ ಮೇಸ್ತ ಅವರನ್ನು ಸನ್ಮಾನಿಸಲಾಗುವುದು. ರಾತ್ರಿ 8.30ಕ್ಕೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 10-30ಕ್ಕೆ ಶಿವದೂತ ಗುಳಿಗ ವಿಭಿನ್ನ ಶೈಲಿಯ ಕನ್ನಡ ನಾಟಕ ನಡೆಯಲಿದೆ.
ಮಾ.25ರಂದು ಶನಿವಾರ ಸಂಜೆ 4.30ಕ್ಕೆ ವಿವಿಧ ವೇಷಭೂಷಣಗೊಳಿಂದ ಕೂಡಿದ ಭವ್ಯ ಮೆರವಣಿಗೆ ಮೂಲಕ ಶ್ರೀ ಸೀತಾರಾಮ ಕಲ್ಯಾಣೋತ್ಸವಕ್ಕೆ ಶ್ರೀ ರಾಮ ದೇವರ ಆಗಮನ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಬೆಂಗಳೂರು ಶಿವಪ್ರಿಯ ಸ್ಕೂಲ್ ಆಫ್ ಡ್ಯಾನ್ಸ್ ಅರ್ಪಿಸುವ ಹನುಮಾನ ಡ್ಯಾನ್ಸ್ ಡ್ರಾಮ ಪ್ರೊಡೆಕ್ಷನ್ ಇವರಿಂದ ಕಲಾ ಆರತಿ ರತ್ನ ಗುರು ಡಾ. ಸಂಜಯ ಶಾಂತಾರಾಮ ಮತ್ತು ತಂಡದವರಿಂದ ನೃತ್ಯ ವೈಭವ ನಡೆಯಲಿದೆ.
ಮಾ.26ರಂದು ಸಂಜೆ 5.30ಕ್ಕೆ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಶ್ರೀ ಸ್ವಾಮಿಗಳು ಶ್ರೀ ಸಂಸ್ಥಾನ ಗೋಕರ್ಣ-ಶ್ರೀ ರಾಮಚಂದ್ರ ಮಠ ಹೊಸನಗರ ಇವರ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥಕವಾಗಿ ತ್ರೇತಾಯುಗದ ಮಹಾ ದೃಶ್ಯ ವೈಭವ ಸೀತಾರಾಮ ಕಲ್ಯಾಣೋತ್ಸವ ನಡೆಯಲಿದೆ. ರಾತ್ರಿ 9 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಮಾ.30 ಗುರುವಾರ ಬೆಳಿಗ್ಗೆ ಅಖಂಡ ಏಕಾಹ ಭಜನೆ, ಮಧ್ಯಾಹ್ನ 12-30ಕ್ಕೆ ಅನ್ನಸಂತರ್ಪಣೆ, ಸಂಜೆ 4.30ಕ್ಕೆ ಪುರಮೆರಣಿಗೆ ನಡೆಯಲಿದೆ. ಮಾ.31ರಂದು ಬೆಳಿಗ್ಗೆ 11 ಗಂಟೆಗೆ ಭಜನಾ ಮಂಗಲೋತ್ಸವ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುರೇಶ ಖಾರ್ವಿ, ಜಿ.ಹೊನ್ನ ಖಾರ್ವಿ, ಶ್ರೀಧರ, ಪಿ.ಚಂದ್ರ ಖಾರ್ವಿ, ಈಶ್ವರ ಖಾರ್ವಿ,ಪಿ.ದಿನಕರ ಖಾರ್ವಿ, ಸಂಜೀವ ಖಾರ್ವಿ, ಲೋಕೇಶ್ ಖಾರ್ವಿ, ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಲಾಯಿತು.











