ಕುಂದಾಪುರ: ಕುಂದಾಪುರದಲ್ಲಿ ಹೋಳಿ ಹಬ್ಬ ಸಂಭ್ರಮ

0
256

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ನಗರದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಂದ ಆಚರಿಸಲಾಯಿತು. ಮಾ.8ರಂದು ಸಂಭ್ರಮದ ಹೋಳಿ ಮೆರವಣಿಗೆ ನಡೆಯಿತು.

ಹೋಳಿ ಕೊಂಕಣಖಾರ್ವಿ ಸಮಾಜದವರ ಅತೀ ದೊಡ್ಡ ಹಬ್ಬ. ಒಂದು ವಾರವಿಡೀ ನಡೆಯುವ ಹೋಳಿ ಹಬ್ಬದ ಅಂತಿಮ ದಿನವಾಗಿ ಬುಧವಾರ ಬಣ್ಣದ ಹಬ್ಬವನ್ನಾಗಿ ಆಚರಿಸಲಾಯಿತು.

ಕುಂದಾಪುರದಲ್ಲಿ ನಡೆಯುವ ಹೋಳಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಕೊಂಕಣ ಖಾರ್ವಿ ಸಮಾಜದವರು ಈ ಹಬ್ಬವನ್ನು ಅದ್ದೂರಿಯಿಂದ ಆಚರಿಸುತ್ತಾರೆ. ಪ್ರತಿಯೊಬ್ಬರು ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಖಾರ್ವಿ ಸಮಾಜದ ದೊಡ್ಡ ಹಬ್ಬವನ್ನಾಗಿ ಹೋಳಿ ಕಾಮದಹನವನ್ನು ಆಚರಿಸಿ, ಸಂಭ್ರಮ ಪಡುತ್ತಾರೆ.

ಮಂಗಳೂರಿನಿಂದ ಗೋವಾದ ತನಕ ನೆಲೆಸಿರುವ ಕೊಂಕಣ ಖಾರ್ವಿ ಸಮಾಜದವರ ದೊಡ್ಡ ಹಬ್ಬವೆಂದರೆ ಅದು ಹೋಳಿ ಕಾಮದಹನ. ಶಕ್ತಿ ಆರಾಧಕರಾದ ಈ ಜನಾಂಗ ಅತೀವ ಧಾರ್ಮಿಕ ಶೃದ್ದೆಯನ್ನು ಹೊಂದಿರುವ ಸಮುದಾಯ. ಕುಂದಾಪುರದ ಖಾರ್ವಿಕೇರಿಯಲ್ಲಿರುವ ಮಹಾಕಾಳಿ ಇವರ ಆರಾಧ್ಯ ದೇವರು. ಇಲ್ಲಿ ನೆಲೆಸಿರುವ ಶ್ರೀ ಮಹಕಾಳಿ, ಮಹಾ ಸರಸ್ವತಿ, ಮಹಾಲಕ್ಷ್ಮೀಯಾಗಿಯೂ ಕಂಗೊಳಿಸುತ್ತಾಳೆ. ಹೋಳಿ ಹಬ್ಬ ಆರಂಭವಾಗುವುದು ಹಾಗೂ ಮುಕ್ತಾಯವಾಗುವುದು ಕೂಡಾ ಈ ದೇವಸ್ಥಾನದಲ್ಲಿಯೇ.

Click Here

ಇಲ್ಲಿ 7 ದಿನಗಳ ಕಾಲ ಹೋಳಿಯನ್ನು ಆಚರಿಸಲಾಗುತ್ತದೆ. ಪ್ರಥಮ ದಿನ ಕುಂದಾಪುರದ ಕುಂದೇಶ್ವರ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಿ ಹೋಳಿ ಮಾಂಡ್ ಕಾರ್ಯಕ್ರಮ ಮಾಡುತ್ತಾರೆ. ‘ಅಡ್ಡೆ ಬೀಳುವುದು’ ಇದರ ವಿಶೇಷ. ನಂತರ ಆಯಾ ಪ್ರದೇಶದಲ್ಲಿ ಚಂದ್ರನ ಬೆಳಕಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಕೋಲಾಟ, ನೃತ್ಯ, ಹೋಳಿ ಹಾಡುಗಳನ್ನು ಪ್ರಸ್ತುತ ಪಡಿಸಲಾಗುತ್ತದೆ.

ಹೋಳಿ ಸುಡುವ ಗದ್ದೆಯಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರುತ್ತದೆ. 4ನೇ ದಿನ ಹೋಳಿ ಹುಣ್ಣಿಮೆಯಂದು ಹೋಳಿ ಸುಡುವ ಕಾರ್ಯಕ್ರಮ ನಡೆಯುತ್ತದೆ. ಹೋಳಿ ಸುಡುವ ಸಂದರ್ಭ 5ಸಾವಿರಕ್ಕೂ ಮಿಕ್ಕಿ ಜನ ಭಾಗವಹಿಸುತ್ತಾರೆ.

ಹೋಳಿ ಈಶ್ವರ ಪಾರ್ವತಿ ದೇವಿಯವರ ಆರಾಧನೆ. ಸ್ಮಶಾನವಾಸಿ ಶಿವನ ಸಂಕೇತವಾಗಿ ರುದ್ರಭೂಮಿಗೆ ಭೇಟಿ ನೀಡಲಾಗುತ್ತದೆ.

ಹೋಳಿಯ 7ನೇ ದಿನವನ್ನು ಬಣ್ಣದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಸಾವಿರಕ್ಕೂ ಮಿಕ್ಕಿ ಜನ ಸೇರುತ್ತಾರೆ. ಖಾರ್ವಿಕೇರಿಯ ಮಹಾಕಾಳಿ ದೇವಸ್ಥಾನದಲ್ಲಿ ದೇವಿಯ ಎದುರಿಗೆ ವಿವಿಧ ಬಣ್ಣಗಳನಿಟ್ಟು ದೇವಿಗೆ ಅರ್ಪಣೆ, ದೇವಿಗೆ ಬಣ್ಣ ಹಚ್ಚುವ ಮೂಲಕ ಬಣ್ಣದ ಹಬ್ಬಕ್ಕೆ ವಿದ್ಯುಕ್ತ ಚಾಲನೆ ನೀಡಿದ ಬಳಿಕ ವೈಭವದ ಪುರಮೆರವಣಿಗೆ ನಡೆಯುತ್ತದೆ.

ಇಂದಿನ ಬಣ್ಣ ಬಣ್ಣದ ನವರಂಗಿನ ಮೆರವಣಿಗೆಯಲ್ಲಿ ಇಡೀ ಕುಂದಾಪುರ ರಂಗುರಂಗಾಗಿ ಕಂಡು ಬಂತು. ಎತ್ತ ನೋಡಿದರೂ ಬಣ್ಣದ ಓಕುಳಿ, ಅದ್ಭುತ ಉತ್ಸಾಹ, ಹಾಡು, ಕುಣಿತಗಳ ಜೋಸ್. ಒಟ್ಟಾರೆಯಾಗಿ ಹೋಳಿ ಹಬ್ಬ ಕುಂದಾಪುರದಲ್ಲಿ ವೈಭವಯುತವಾಗಿ ಸಂಪನ್ನ ಗೊಂಡಿತು.

Click Here

LEAVE A REPLY

Please enter your comment!
Please enter your name here