ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನ ಹರ್ತಟ್ಟು ಗಿಳಿಯಾರು ಇದರ ಸುತ್ತುಪೌಳಿ ನಿರ್ಮಾಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 3ಲಕ್ಷ ಸಹಾಯಧನ ಬಿಡುಗಡೆಗೊಂಡಿದ್ದು ಇದರ ಚೆಕ್‍ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ದಿನೇಶ್ ಶೇರಿಗಾರ್ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಇವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದೇವಳದ ವತಿಯಿಂದ ಯೋಜನಾಧಿಕಾರಿಗಳನ್ನು ಗೌರವಿಸಲಾಯಿತು. ಸೇವಾ ಪ್ರತಿನಿಧಿ ಸರೋಜ ಚಂದ್ರ ಪೂಜಾರಿ, ಮೇಲ್ವಿಚಾರಕಿ ಸುಲೋಚನಾ, ದೇವಳದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಹರೀಶ್ ದೇವಾಡಿಗ, ಕೋಶಾಧಿಕಾರಿ ಶ್ರೀಕಾಂತ್ ಶೆಣೈ, ಉಪಾಧ್ಯಕ್ಷ ತಿಮ್ಮ ಕಾಂಚನ್, ಸಿದ್ಧ ದೇವಾಡಿಗ, ಚಂದ್ರ ಹಾಡಿಕೆರೆ, ರಾಘವೇಂದ್ರ, ಅರ್ಚಕ ಸುಧೀರ್ ಐತಾಳ್ ಮತ್ತಿತರರು ಉಪಸ್ಥಿತರಿದ್ದರು.











