ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಮಾಂಗಲ್ಯ ಸೂತ್ರ ಮತ್ತು ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಆಯ್ದ ಫಲಾನುಭವಿಗಳಿಗೆ ಚೆಕ್ ವಿತರಿಸುವ ಕಾರ್ಯಕ್ರಮ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಂಘದ ದಶಮ ಸಂಭ್ರಮ ಮಹಾಪೋಷಕರಾದ ಬಿ. ವಿನಯ್ ಕುಮಾರ್ ಶೆಟ್ಟಿ , ಪೋಷಕರಾದ ಉದ್ಯಮಿ ಹೊಂಬಾಡಿ ಮೇಲ್ಮನೆ ಜಗನ್ನಾಥ ಶೆಟ್ಟಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಸಂಘ ನಡೆಸಿಕೊಂಡು ಬಂದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭಕೋರಿದರು.
ಮಾಂಗಲ್ಯ ಸೂತ್ರ ಯೋಜನೆಯ ಫಲಾನುಭವಿಗಳಾದ ಕಮಲಶಿಲೆಯ ಪೂರ್ಣಿಮಾ ಶೆಟ್ಟಿ, ಯಡಮೊಗೆಯ ಸವಿತಾ ಶೆಟ್ಟಿ, ಸಿದ್ದಾಪುರದ ಉಷಾ ಶೆಟ್ಟಿ ಯವರಿಗೆ ಹಾಗೂ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಆನಂದ ಶೆಟ್ಟಿ ನಂಚಾರು, ಕಿರಣ್ ಶೆಟ್ಟಿ ಅಂಪಾರು, ದಿವಾಕರ ಶೆಟ್ಟಿ ಆಲೂರು, ರಾಧಾಕೃಷ್ಣ ಶೆಟ್ಟಿ ಯಳೂರು, ಭವಾನಿ ಶೆಟ್ಟಿ ಆಲೂರು, ರಂಜಿತಾ ಶೆಟ್ಟಿ ಸಿರಿಮಠ, ಶಿವ ಕುಮಾರ್ ಮಂಗಲ್ ಪಾಂಡ್ಯ ರಸ್ತೆ ಕುಂದಾಪುರ ಹಾಗೂ ವಿಶ್ವನಾಥ ಶೆಟ್ಟಿ ಸಾರ್ಕಲ್ ಕಾವ್ರಾಡಿಯವರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು ಹಾಗೂ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್ ಶೆಟ್ಟಿ ಹರ್ಕೂರು, ಸತೀಶ್ ಶೆಟ್ಟಿ ಹೆಸ್ಕತ್ತೂರು, ಸುಕುಮಾರ್ ಶೆಟ್ಟಿ ಕಮಲಶಿಲೆ, ಪ್ರಶಾಂತ್ ಕುಮಾರ್ ಶೆಟ್ಟಿ ಶಿರೂರು, ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಉದಯ ಶೆಟ್ಟಿ ಹೊಸಂಗಡಿ, ಮಾಜಿ ಅಧ್ಯಕ್ಷರಾದ ಸುಕೇಶ್ ಶೆಟ್ಟಿ ಹೊಸಮಠ, ಸುಕುಮಾರ್ ಶೆಟ್ಟಿ ಹೇರಿಕುದ್ರು, ರಾಜೀವ ಶೆಟ್ಟಿ ಹೆಂಗವಳ್ಳಿ, ಪುರಂದರ ಶೆಟ್ಟಿ ಹಿಲಿಯಾಣ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಪ್ರಸ್ತಾಪಿಸಿ ಸರ್ವರನ್ನು ಸ್ವಾಗತಿಸಿದರು. ಸಂಘದ ಮಾಜಿ ಕೋಶಾಧಿಕಾರಿ ಮನೋರಾಜ್ ಶೆಟ್ಟಿ ಜಾಂಬೂರು ನಿರೂಪಿಸಿ ವಂದಿಸಿದರು.











