ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್. ಎಸ್. ಎಸ್ ಘಟಕ ಜೇಸಿಐ ಕುಂದಾಪುರ ಸಿಟಿ, ನಮ್ಮ ಭೂಮಿ ಕನ್ಯಾನ ಹಾಗು ಕುಂದಾಪುರ ತಾಲೂಕು ಸ್ವೀಪ್ ಸಮಿತಿ ಸಹಯೋಗದೊಂದಿಗೆ ನಾವು ಮತ್ತು ನಮ್ಮ ಮತ ಮಾರಾಟಕಿಲ್ಲ ಎಂಬ ದ್ಯೇಯ ವಾಕ್ಯದೊಂದಿಗೆ ಮತದಾನ ಜಾಗೃತಿ ಅಭಿಯಾನ ನಡೆಯಿತು. ನಗರದ ಶಾಸ್ತ್ರಿ ಸರ್ಕಲ್ ವೃತ್ತದ ಸಮೀಪದ ತಾಲೂಕು ಪಂಚಾಯತ್ ಮಂಡಳಿಯಿಂದ ಹೊಸ ಬಸ್ಸ್ ಸ್ಟ್ಯಾಂಡ್ ನಿಲ್ದಾಣದವರೆಗೆ ಜಾಥಾ ಹಮ್ಮಿಕೊಳ್ಳಲಾಯಿತು.
ಸಾಂವಿಧಾನಿಕ ಹಕ್ಕಾದ ಮತವನ್ನು ಅತ್ಯಂತ ಗೌರವ ಪೂರ್ಣವಾಗಿ ನಿರ್ಭೀತಿಯಿಂದ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಚಲಾಯಿಸೋಣ, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳನ್ನು ಜನಪರ ಅಭಿವೃಧ್ಧಿಗೆ ಉತ್ತರದಾಯಿಗಳಾಗುವಂತಹ ಪ್ರತಿನಿಧಿಗಳನ್ನು ಆರಿಸೋಣ, ಇದಕ್ಕೆ ನಾವು ಪ್ರತಿಯೋಬ್ಬ ಸ್ವಾಭಿಮಾನಿ ಮತದಾರರು ಪರಸ್ಪರ ಕೈಜೋಡಿಸೋಣ ಎಂದು ಕುಂದಾಪುರದ ಶಾಸ್ತ್ರಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರಮಾಣ ಮಾಡಿ ಕುಂದಾಪುರದ ಪಟ್ಟಣದಾದ್ಯಂತ ಮೇರವಣಿಗೆ ಸಾಗಿ ಘೋಷಣೆ ಕೂಗುತ್ತಾ ಕಾಂಚಣದ ಝಣ ಝಣಗಳ ನಡುವೆ ನಾವು ಮಾಯಾವಾಗದೆ ಗೌರವಯುತವಾಗಿ ಪ್ರಜಾಪ್ರಭುತ್ವವನ್ನ ಏತ್ತಿ ಹಿಡಿಯೋಣ ಏಂದು ಸಾರಿದರು.
ಈ ಸಂದರ್ಭದಲ್ಲಿ ಜೆಸಿಐ ಕುಂದಾಪುರ ಸಿಟಿ ಅಧ್ಯಕ್ಷೆ ಡಾ| ಸೋನಿ ಡಿ ಕೋಸ್ತಾ, ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಕಾರ್ಯದರ್ಶಿ ಸಂದೇಶ್ ಶೆಟ್ಟಿ, ಅನಿತಾ ಆ್ಯಲೀಸ್ ಡಿಸೋಜಾ, ಎನ್. ಎಸ್. ಎಸ್ ಸಹಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ, ನಮ್ಮ ಭೂಮಿ ಸಂಸ್ಥೆಯ ಕೃಪಾ ಎಮ್. ಎಮ್., ಶ್ರೀನಿವಾಸ ಗಾಣಿಗ, ಗಣೇಶ್ ಶೆಟ್ಟಿ, ನರಸಿಂಹ ಗಾಣಿಗ, ಅನೀತಾ, ಆಶಾ, ಹೇಮಂತ್ ಉಪಸ್ಥಿತರಿದ್ದರು.











