ಕುಂದಾಪುರ :ರಾಜ್ಯದಲ್ಲಿ ಆರಂಭಗೊಂಡ ಸಾರ್ವತ್ರಿಕ ಚುನಾವಣೆ – ಬೆಳಿಗ್ಗೆಯಿಂದಲೇ ಬಿರುಸಿನ ಮತದಾನಕ್ಕೆ ಚಾಲನೆ

0
406

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕರ್ನಾಟಕದಲ್ಲಿ 2023-28ರ ಅವಧಿಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆ ಬುಧವಾರ ಬೆಳಿಗ್ಗೆ ಏಳು ಗಂಟೆಗೇ ಆರಂಭಗೊಂಡಿದೆ.

Click Here

ವಿಶೇಷವೆಂದರೆ ಸಾಮಾನ್ಯವಾಗಿ ಬೆಳಿಗ್ಗೆ ನೀರಸ ಮಾತದಾನ ನಡೆಯುತ್ತಿದ್ದರೆ ಈ ಬಾರಿ ಯುವಕರು, ಮಹಿಳೆಯರು ಸೇರಿದಂತೆ ಹಿರಿಯ ಮತದಾರರು ಬೆಳಿಗ್ಗೆ 6.45 ಕ್ಕೇ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದು ಈ ವರ್ಷದ ಚುನಾವಣೆಯ ವಿಶೇಷ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಹೆಗ್ಡೆ ಮೊಳಹಳ್ಳಿ ತಮ್ಮ ಸ್ವಕ್ಷೇತ್ರವಾದ ಮೊಳಹಳ್ಳಿಯ ನಾಲ್ಕನೇ ವಾರ್ಡಿನ ಮತಗಟ್ಟೆ ಕೈಲ್ಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 209592 ಮತದಾರರಿದ್ದಾರೆ. ಒಟ್ಟು 222 ಮತಗಟ್ಟೆಗಳಿವೆ. ಇದರಲ್ಲಿ 38 ನಗರ ಪ್ರದೇಶ, 184 ಗ್ರಾಮೀಣ ಪ್ರದೇಶದ ಮತಗಟ್ಟೆಗಳಾಗಿವೆ.

Click Here

LEAVE A REPLY

Please enter your comment!
Please enter your name here