ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಪತ್ನಿ ಹಾಗೂ ಕುಟುಂಬಿಕರೊಂದಿಗೆ ಬಂದು ಕನ್ಯಾನ ಶಾಲೆಯಲ್ಲಿ ಮತ ಚಲಾಯಿಸಿದರು.
ಬಳಿಕ ಮಾತನಾಡಿದ ಗೋಪಾಲ ಪೂಜಾರಿ, ಮತದಾನದ ಸ್ಥಳದಲ್ಲಿ ಬೆಳಕಿನ ಸಮಸ್ಯೆಯಿದ್ದು, ಇವಿಎಂ ಯಂತ್ರದ ಬಳಿ ಹೆಸರು, ಚಿಹ್ನೆ ಅಸ್ಪಷ್ಟ ಕಾಣಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.











