ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮತ ಚಲಾಯಿಸುವುದೆಂದರೆ ಸರ್ಕಾರವನ್ನು ಪ್ರಶ್ನಿಸುವ ಮತ್ತು ನಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದಿಡಲು ನಮಗಿರುವ ನೈತಿಕ ಅವಕಾಶ ಎನ್ನುವುದನ್ನು ಪ್ರತಿಯೊಬ್ಬ ಮತದಾರ ಅರ್ಥಮಾಡಿಕೊಳ್ಳಬೇಕು ಎಂದು ಹೋಟೆಲ್ ಉದ್ಯಮಿ, ಫಾರ್ಚೂನ್ ಗ್ರೂಪ್‌ಮಾಲಿಕ ವಕ್ವಾಡಿ ಪ್ರವೀಣ್ ಶೆಟ್ಟಿ ಹೇಳಿದರು
ಅವರು ತಮ್ಮ ತವರೂರಾದ ವಕ್ವಾಡಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಮಾತನಾಡಿದರು.
ಪ್ರತಿಯೊಬ್ಬರೂ ಮತದಾನಕ್ಕೆ ಮುಂಚೆ ಯೋಚಿಸಿ ಮತ ಚಲಾಯಿಸಿ. ಸಭದ್ರ ಆಡಳಿತಕ್ಕೆ ಪ್ರತಿಯೊಬ್ಬರ ಮತವೂ ಅಗತ್ಯ. ಯಾರೂ ನಿರ್ಲಕ್ಷ್ಯ ಮಾಡದೇ ಮತದಾನ ಮಾಡಿ ಎಂದರು.











