ಕಾರ್ಕಡ- ಪಂಚವರ್ಣ ಸಂಸ್ಥೆಯ ರೈತರೆಡೆಗೆ ನಮ್ಮ ನಡಿಗೆ 25ನೇ ಮಾಲಿಕೆ

0
287

Click Here

Click Here

ರೈತರೆಡೆಗೆ ನಮ್ಮ ನಡೆ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ – ನರಸಿಂಹ ನಕ್ಷತ್ರಿ

ಕುಂದಾಪುರ ಮಿರರ್ ಸುದ್ದಿ…

ಕೋಟ: ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಸಾರ್ವಜನಿಕ ವೇದಿಕೆಯಲ್ಲಿ ಗುರುತಿಸುತ್ತಾರೆ ಆದರೆ ಕೃಷಿಕರನ್ನು ಗುರುತಿಸುವ ಕಾಯಕ ಬಲು ಅಪರೂಪ, ಅದರಲ್ಲಿ ಸಂಘ ಸಂಸ್ಥೆಗಳು ರೈತರನ್ನು ಗುರುತಿಸುವುದೇ ಮಹತ್ವವಾದ ಕಾರ್ಯ ಎಂದು ಕೃಷಿ ಕ್ಷೇತ್ರದ ಅಧ್ಯಯಶೀಲರಾದ ನರಸಿಂಹ ನಕ್ಷತ್ರಿ ಹೇಳಿದ್ದಾರೆ.

ಶನಿವಾರ ಕೋಟ ಪಂಚವರ್ಣ ಯುವಕ ಮಂಡಲ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತ್ರತ್ವದಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ, ಗೀತಾನಂದ ಫೌಂಡೇಶನ್ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ ಇವರ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 25ನೇ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ವಿದ್ಯಾಮಾನಗಳಲ್ಲಿ ಕೃಷಿಯಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ ಆ ಮೂಲಕ ರೈತರಿಗೆ ನೈಜ ಬೆಲೆ ಸಿಗದೆ ಅಸಾಯಕರಾಗುತ್ತಿದ್ದಾರೆ.
ಬೆಳೆಗಳಲ್ಲಿ ನಾನಾ ರೀತಿಯ ಬೆಳೆಗಳನ್ನು ಬೆಳೆಯಬೇಕು ಆ ಮೂಲಕ ಲಾಭದಾಯಕವಾಗಿಸಲು ಪ್ರಯತ್ನಿಸಬೇಕು,ಕೃಷಿ ಕ್ಷೇತ್ರ ಖಾಸಗಿಕರಣವಾಗಲು ಬಿಡಬಾರದು, ನಮ್ಮ ದೇಶ ಕೃಷಿ ಅವಲಂಬಿತ ರಾಷ್ಟ್ರ ಉಳಿಯಬೇಕು ವಿನಹ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ರಾಷ್ಟ್ರ ವಾಗಬಾರದು, ಆಮದು ಮಾಡಿಕೊಂಡ ಪದಾರ್ಥಗಳು ವಿಷಕಾರಿ ಎಂಬುವುದನ್ನು ಮನಗಾಣಬೇಕು ಈ ದಿಸೆಯಲ್ಲಿ ನಾವುಗಳು ಮನೆಯಲ್ಲೆ ಆಹಾರ ಬೆಳೆಗಳನ್ನು ಬೆಳಸುವಂತ್ತಾಗಬೇಕು ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣಮಾಡಲು ಸಾಧ್ಯ, ರೈತರೆಡೆಗೆ ನಮ್ಮ ನಡೆ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಕಾರ್ಯಕ್ರಮ,ಕೃಷಿಯಲ್ಲಿ ಯುವ ಸಮೂಹ ಹೆಚ್ಚು ಹೆಚ್ಚು ತೊಡಗಿಕೊಂಡು ಚಂದ್ರ ಕಾರ್ಕಡರಂತೆ ಸಿದ್ಧಗೊಳ್ಳಬೇಕು ಎಂದು ಆಶಿಸಿದರು.

Click Here

ಈ ಸಂದರ್ಭದಲ್ಲಿ ಸಾಲಿಗ್ರಾಮದ ಚಂದ್ರ ಕಾರ್ಕಡ ಇವರಿಗೆ ಕೃಷಿ ಪರಿಕರ ಇತ್ತು ಗೌರವಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗುತ್ತಿಗೆದಾರ ವಿಶ್ವೇಶ್ವರ ಹೊಳ್ಳ ಕಾರ್ಕಡ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಪುಷ್ಭಾ ಕೆ ಹಂದಟ್ಟು, ಸಾಲಿಗ್ರಾಮ ಸಾಮಾಜಿಕ ಕಾರ್ಯಕರ್ತ ರಮೇಶ್ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು. ರೈತರೆಡೆಗೆ ನಮ್ಮ ನಡಿಗೆ ಅಂಗವಾಗಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮವನ್ನು ಸಂಯೋಜಿಸಿ ಸ್ವಾಗತಿಸಿದರು. ಸಂಚಾಲಕ ಅಮೃತ್ ಜೋಗಿ ವಂದಿಸಿದರು.

Click Here

LEAVE A REPLY

Please enter your comment!
Please enter your name here