ಗುಂಡ್ಮಿ- ಪದ್ಮಶಾಲಿ ಸಮಾಜ ಸೇವಾ ಸಂಘದ ವತಿಯಿಂದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

0
291

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಪದ್ಮಶಾಲಿ ಸಮಾಜ ಸೇವಾ ಸಂಘ ಸಾಸ್ತಾನ ವಲಯ ಇದರ 19 ನೇ ವರ್ಷದ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ಮೇ.21ರಂದು ಶ್ರೀ ವೀರಭದ್ರ ದುರ್ಗಾ ಸಹಪರಿವಾರ ಚಿಕ್ಕು ದೇವಸ್ಥಾನ ಗುಂಡ್ಮಿ ಸಾಸ್ತಾನ ಇಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದ್ಮಶಾಲಿ ಸಮಾಜ ಸೇವಾ ಸಂಘ ಸಾಸ್ತಾನ ವಲಯ ಅಧ್ಯಕ್ಷ ಭಾಸ್ಕರ ಶೆಟ್ಟಿಗಾರ್ ವಹಿಸಿದ್ದರು.

Click Here

ಮುಖ್ಯ ಅತಿಥಿಗಳಾಗಿ ಸಾಲಿಕೇರಿ ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ.ಎಂ.ಶೆಟ್ಟಿಗಾರ್, ಮೈಸೂರು ರೈಲ್ವೇ ಇಲಾಖೆಯ ಸುರೇಶ್ ಶೆಟ್ಟಿಗಾರ್ ಗುಂಡ್ಮಿ , ಉಡುಪಿಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಎ.ಜಿ.ಎಂ ವಿಠಲ ಶೆಟ್ಟಿಗಾರ್ ಗುಂಡ್ಮಿ ಉಪಸ್ಥಿತರಿದ್ದರು.

19 ವರ್ಷಗಳಿಂದ ನಿರಂತರ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದ ಪ್ರಾಯೋಜಕ ಉದ್ಯಮಿ ಮಾಧವ ಶೆಟ್ಟಿಗಾರ್, ಇವರು ಸುಮಾರು 15 ಸಾವಿರ ವೆಚ್ಚದಲ್ಲಿ ಕೊಡ ಮಾಡಿದ ಪುಸ್ತಕಗಳನ್ನು ಸುಮಾರು 50 ವಿದ್ಯಾರ್ಥಿಗಳಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮ್ಯಾರಥಾನ್ ಓಟಗಾರ ವಿಠಲ ಶೆಟ್ಟಿಗಾರ್ ಸಾಸ್ತಾನ ಇವರನ್ನು ಗೌರವಿಸಲಾಯಿತು. ಸಂಘಟನೆಯ ಪ್ರಮುಖರಾದ ಪ್ರಕಾಶ ಶೆಟ್ಟಿಗಾರ್ ಸಾಲಿಗ್ರಾಮ ಸ್ವಾಗತಿಸಿದರು. ಶ್ರೀನಿವಾಸ ಶೆಟ್ಟಿಗಾರ್ ಶೆಟ್ಟಿಗಾರ್ ಗುಂಡ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here