ಕುಂದಾಪುರ ಮಿರರ್ ಸುದ್ದಿ…
ಕೋಟ: ಸರಕಾರಿ ಸಮುದಾಯ ಆರೋಗ್ಯ ಕೇಂದ್ರ ಕೋಟ ಇಲ್ಲಿನ ಮುಖ್ಯ ವ್ಯೆದ್ಯಾಧಿಕಾರಿಯವರ ಕೋರಿಕೆಯ ಮೆರೆಗೆ ಸುಮಾರು ಮೂರು ಲಕ್ಷ ವೆಚ್ಚದ ಮಲ್ಟಿ ಪ್ಯಾರ ಪೆಶೆಂಟ್ ಮಾನಿಟರ್, ಡಿಪೆಬ್ರಿಲೇಟರ್ ಮತ್ತು ಪುಡ್ ಟ್ರಾಲಿಯನ್ನು ಕೋಟ ಮಣೂರು ಗೀತಾನಂದ ಪೌಂಡೇಶನ್ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಗೀತಾನಂದ ಟ್ರಸ್ಟ್‌ನ ಪ್ರವರ್ತಕರಾದ ಆನಂದ್.ಸಿ ಕುಂದರ್ ಅದನ್ನು ಡಾ.ವಿಶ್ವನಾಥ ಅವರಿಗೆ ಹಸ್ತಾಂತರಿಸಿದರು. ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್ ಮತ್ತು ಗೀತಾನಂದ ಪೌಂಡೇಶನ್ ಸಂಯೋಜಕ ರವಿಕಿರಣ್ ಕೋಟ ಉಪಸ್ಥಿತರಿದ್ದರು.











