ಶೃಂಗೇರಿ ಬೆಳಂದೂರಿನಲ್ಲಿ ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಪ್ರದರ್ಶನ

0
213

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ :ತಾಳಮದ್ದಳೆ ಅರ್ಥಧಾರಿ, ಪ್ರಸಂಗ ಕವಿ, ಪ್ರಾಧ್ಯಾಪಕ ಪವನ್ ಕಿರಣ್‍ಕೆರೆ ಮತ್ತು ಆಶಾ ದಂಪತಿಗಳ ಸುಪುತ್ರ ನಿನಾದ ಕಿರಣ್‍ಕೆರೆಯವರ ಬ್ರಹ್ಮೋಪದೇಶ ಶುಭಾವಸರದಲ್ಲಿ ಶೃಂಗೇರಿ ಸಮೀಪದ ಬೆಳಂದೂರಿನಲ್ಲಿ ವಿಶ್ವವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ ನಿರ್ದೇಶನದಲ್ಲಿ ಸಾಲಿಗ್ರಾಮ ಮಕ್ಕಳ ಮೇಳದ ಕಲಾವಿದರಿಂದ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪ ರಚಿತ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನ ನಡೆಯಿತು.

Click Here

ಹಿಮ್ಮೇಳದಲ್ಲಿ ಭಾಗವತರಾಗಿ ಸುಜಯೀಂದ್ರ ಹಂದೆ, ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಸುದೀಪ ಉರಾಳ, ಮುಮ್ಮೇಳದಲ್ಲಿ ಆರ್ಯನ್, ಮನೋಜ್, ಮನೀಷ್, ಚಿನ್ಮಯ್ ಮಯ್ಯ, ಸಮೀಕ್ಷಿತ್ ಆಚಾರ್ ಮತ್ತು ಪ್ರಸಾಧನದಲ್ಲಿ ಸುದರ್ಶನ ಉರಾಳ, ಸುಹಾಸ ಕರಬ, ಆದಿತ್ಯ ಹೊಳ್ಳ. ಮನೋಜ್ ಆಚಾರ್ ಭಾಗವಹಿಸಿದ್ದರು.

Click Here

LEAVE A REPLY

Please enter your comment!
Please enter your name here