ಕುಂದಾಪುರ ಮಿರರ್ ಸುದ್ದಿ…
ಕೋಟ: ಕಲಿಕೆ ಪ್ರಕ್ರಿಯೆಯ ಮೂಲಕ ಶಾಲಾ ಶಿಕ್ಷಣದ ಆರಂಭೋತ್ಸವ ಕಾರ್ಯಕ್ರಮ ಹಬ್ಬದ ವಾತವರಣ ಮಾಡಿಸಿದೆ. ಸುತ್ತ ಮುತ್ತಲಿನ ಪರಿಸರದಲ್ಲಿ ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಗೆ ತನ್ನದೇ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಶ್ರೇಯಾಂಕಿತ ಸ್ಥಾನ ಪಡೆಯುತ್ತಿರುವುದು ಸಂಸ್ಥೆಯ ಬೆಳವಣಿಗೆಯ ಹೆಗ್ಗಳಿಕೆ. ಶಾಲಾ ಬೆಳವಣಿಗೆ ಸಮುದಾಯದ ನೆರವಿನೊಂದಿಗೆ ಸಾಗಬೇಕು ಎಂದು ಹಳೆವಿದ್ಯಾರ್ಥಿ ಸಂಘ ಅಧ್ಯಕ್ಷ ಚಂದ್ರ ಶೆಟ್ಟಿಯಾಳಹಕ್ಲು ಹೇಳಿದರು.
ಸರಕಾರಿ ಪ್ರೌಢ ಶಾಲೆ ವಡ್ಡರ್ಸೆ ಇಲ್ಲಿ 2023 – 24 ನೇ ಶೈಕ್ಷಣಿಕ ಸಾಲಿನ ಆರಂಭೋತ್ಸವ ಬುಧವಾರ ಸಂಪನ್ನಗೊಂಡಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮಂಜುನಾಥ ಮಧುವನ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಯ ಅದ್ದೂರಿಯಾಗಿ ನಡೆಯುತ್ತಿದ್ದು , ಈಗಾಗಲೇ ಪಠ್ಯ ಪುಸ್ತಕ , ಸಮವಸ್ತ್ರ ದೊರೆಯುತ್ತಿರುವುದು ಅಭ್ಯಾಸಕ್ಕೆ ಬಹಳಷ್ಟು ಅನುಕೂಲವಾಗಲಿದೆ . ಶಾಲಾ ಮಕ್ಕಳು ಬೇಸಿಗೆ ರಜೆಯನ್ನು ಮುಗಿಸಿಕೊಂಡು, ಶಿಕ್ಷಣದ ಚಟುವಟಿಕೆಗೆ ಮಕ್ಕಳನ್ನು ಅಣಿಗೊಳಿಸುವುದು ಶಿಕ್ಷಕರ ಕರ್ತವ್ಯವಾಗಬೇಕು ಎಂದರು. ಸಂಸ್ಥೆಯ ಮುಖ್ಯ ಶಿಕ್ಷಕರಾದ ಗಾಯತ್ರಿದೇವಿ.ಎಂ. ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಮಕ್ಳಳು ಮತ್ತು ಪೋಷಕರು ಬಣ್ಣದ ಚಿಟ್ಟೆಯ ಚಿತ್ರವನ್ನು ಅಂಟಿಸುವ ಮೂಲಕ ಹರ್ಷವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪಠ್ಯ ಪುಸ್ತಕ, ಸಮವಸ್ತ, ಲೇಖನವನ್ನು ಮಕ್ಕಳಿಗೆ ನೀಡಲಾಯಿತು. ಹಳೆ ವಿದ್ಯಾರ್ಥಿ ರವಿ ಬನ್ನಾಡಿ ವೇದಿಕೆಯಲ್ಲಿದ್ದರು. ಸಹಶಿಕ್ಷಕ ಆನಂದ ಶೆಟ್ಟಿ ಸ್ವಾಗತಿಸಿದರು, ಕನ್ನಡ ಭಾಷಾ ಶಿಕ್ಷಕಿ ಗೀತಾ ವಂದಿಸಿದರು. ಶಿಕ್ಷಕ ಹೆರಿಯ ಮಾಷ್ಟರ್ ಕಾರ್ಯಕ್ರಮ ನಿರ್ವಹಿಸಿದರು.











