ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಕುಂದಾಪುರ ವಲಯ ಇಲ್ಲಿನ ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಂತೋಷ ಕುಮಾರ ಅಧ್ಯಕ್ಷತೆಯಲ್ಲಿ ಶಾಲಾ ಪ್ರಾರಂಭೊತ್ಸವದ ಅಂಗವಾಗಿ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ ಮತ್ತು ನೋಟ್ ಪುಸ್ತಕ ವಿತರಣಾ ಸಮಾರಂಭವು ನಡೆಯಿತು.
ಶಾಲಾ ಮಕ್ಕಳಿಗೆ ಸುಮಾರು ರೂ. 35,000/ ವೆಚ್ಚದಲ್ಲಿ ಉಚಿತ ನೋಟ ಪುಸ್ತಕ ಕೊಡುಗೆಯಾಗಿ ನೀಡಿದ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಸಭಾಪತಿಗಳಾದ ಜಯಕರ ಶೆಟ್ಟಿ ಮೂಡುಬೈಲೂರು ಇವರು ಮಾತನಾಡುತ್ತ, “ನಮ್ಮ ಶಾಲೆ ನಮ್ಮೂರ ಹೆಮ್ಮೆ. ಈ ಶಾಲೆ ಖಾಸಗಿ ಶಾಲೆಗಳಿಗಿಂತಲೂ ಅತ್ಯುತ್ತಮ ಮೂಲಭೂತ ಸೌಕರ್ಯವನ್ನು ಹೊಂದಿದ್ದು ಇದರ ಸದುಪಯೋಗವನ್ನು ಊರವರು ಪಡೆದುಕೊಳ್ಳ ಬೇಕು” ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಶಾಲಾ ಎಸ್ ಡಿ ಎಮ್ ಸಿ ಸದಸ್ಯರಾದ ಜೈವೀರ ಶೆಟ್ಟಿ, ರಚನಾ ಕ್ರೋಡಬೈಲೂರಿನ ಕಾರ್ಯದರ್ಶಿ ಸುಧಾಕರ ಬೈಲೂರು, ಉಪಸ್ಥಿತರಿದ್ದರು.
ಶಾಲಾ ಮುಖು ಶಿಕ್ಷಕಿ ಗಿರಿಜಾ ಡಿ ಸ್ವಾಗತಿಸಿದರು. ಸಹಶಿಕ್ಷಕ ಆನಂದ ಕುಲಾಲ ಪ್ರಸ್ತವನೆಗೈದರು. ಸಹ ಶಿಕ್ಷಕಿ ಸಂದ್ಯಾ ಪಠ್ಯಪುಸ್ತಕ ಮತ್ತು ನೋಟ್ ಪುಸ್ತಕ ವಿತರಣೆಗೆ ಸಹಕರಿಸಿದರು. ಶಾಲಾ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕ ನಾರಾಯಣ ಅಡಿಗ ವಂದಿಸಿದರು. ಸಹ ಶಿಕ್ಷಕ ಸಂತೋಷ ವಂದಿಸಿದದರು.











