ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಅಮಾಸೆಬೈಲು ಕಿರಣ್ ಕುಮಾರ್ ಕೊಡ್ಗಿಯವರನ್ನು ಅಭಿನಂದಿಸಲಾಯಿತು.
ಹೋಟೆಲ್ ಶೆರೋನಿನ ಮಿನಿ ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಶಾಸಕರನ್ನು ಪ್ರಭಾಕರ ಟೈಲ್ಸ್ ನ ಪಾಲುದಾರರು, ಉದ್ಯಮಿ ಪ್ರಶಾಂತ ತೋಳಾರ್ ಸನ್ಮಾನಿಸಿದರು.
ಅಭಿನಂದನಾ ಭಾಷಣದಲ್ಲಿ ಶ್ರೀಯುತರು ಕೊಡ್ಗಿ ಕುಟುಂಬದ ಮೂರು ತಲೆಮಾರುಗಳು ಮಾಡಿದ ರಾಜಕೀಯ ಮತ್ತು ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು. ಅಭಿನಂದನೆಗೆ ಉತ್ತರಿಸಿದ ಮಾನ್ಯ ಶಾಸಕರು ಉತ್ತಮ ಅಭಿವೃದ್ಧಿಯನ್ನು ಮಾಡುವಾಗ ಯಾವುದೇ ರಾಜಿ ಇಲ್ಲ ಎಂದರು. ಹಾಗೆಯೇ ಅಭಿನಂದಿಸಿದ ಪ್ರಭು ಕುಟುಂಬಕ್ಕೆ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ವಾಕಿಂಗ್ ಕ್ಲಬ್ ನ ಸರ್ವ ಸದಸ್ಯರು, ದಿ. ಮಂಜುನಾಥ ಪ್ರಭು ಕುಟುಂಬದ ಹಿತೈಷಿಗಳು ಭಾಗಿಯಾಗಿದ್ದರು.











