ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕುಂದಾಪುರ, ತಾಲೂಕಿನ ತೆಕ್ಕಟ್ಟೆ ವಲಯ ಕಾರ್ಯ ಕ್ಷೇತ್ರದ ತೆಕ್ಕಟ್ಟೆ ಬಿ ಒಕ್ಕೂಟದಲ್ಲಿ ನೂತನವಾಗಿ ಮಾಣಿಕ್ಯ ಸ್ವಸಹಾಯ ಸಂಘ ಉದ್ಘಾಟನೆಗೊಂಡಿತು. ಉದ್ಘಾಟಕರಾಗಿ ಮಂಜುನಾಥ್ ದೀಪ ಬೆಳಗಿಸುವ ಮೂಲಕ ಮಾಣಿಕ್ಯ ಸಂಘವನ್ನು ಉದ್ಘಾಟಿಸಿದರು. ವಲಯದ ಮೇಲ್ವಿಚಾರಕರಾದ ರಾಧಿಕಾ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಸೇವಾ ಪ್ರತಿನಿಧಿಯಾದ ಸಾರಿಕಾ ವಿದ್ಯಾಶ್ರೀ ಅಮೃತ, ಸಂಘದ ಪ್ರಮುಖರಾದ ವಿಘ್ನೇಶ್ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.











