ಸೇವಾ ಮನೋಭಾವನೆಯಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ – ಜಗದೀಶ್ ನಾವಡ
ಕುಂದಾಪುರ ಮಿರರ್ ಸುದ್ದಿ…
ಕೋಟ: ರೋಟರಿಯಂತಹ ಸಂಘ-ಸಂಸ್ಥೆಗಳು ಸೇವಾ ಮನೋಭಾವನೆಯನ್ನು ಕಲಿಸಿಕೊಡುತ್ತದೆ ಹಾಗೂ ಸೇವೆಯ ಮೂಲಕ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಜಗದೀಶ ನಾವಡ ತಿಳಿಸಿದರು.
ಅವರು ಜೂ.30ರಂದು ಕೋಟದ ಸಮುದ್ಯತಾ ಸಭಾಂಗಣದಲ್ಲಿ ಜರಗಿದ ರೋಟರಿ ಕ್ಲಬ್ ಕೋಟ-ಸಾಲಿಗ್ರಾಮದ ಪದಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ದೇವಪ್ಪ ಪಟಗಾರ್ ಹಾಗೂ ಕಾರ್ಯದರ್ಶಿ ತಿಮ್ಮ ಪೂಜಾರಿ ಮತ್ತು ತಂಡದವರಿಗೆ ರೋಟರಿ ವಲಯ 2ರ ಸಹಾಯಕ ಗವರ್ನರ್ ನರಸಿಂಹ ಪ್ರಭು ಪದಪ್ರದಾನ ನೆರವೇರಿಸಿ ಮಾತನಾಡಿ, ರೋಟರಿ ಕೋಟ-ಸಾಲಿಗ್ರಾಮ ಸಂಸ್ಥೆಗೆ ಸಾಕಷ್ಟು ಉತ್ತಮ ಇತಿಹಾಸವಿದ್ದು, ಯಶಸ್ವಿ ರೋಟರಿಗಳು ಈ ಸಂಘದ ಮೂಲಕ ಸಮಾಜಕ್ಕೆ ಪರಿಚಯವಾಗಿದ್ದಾರೆ. ಈ ಬಾರಿ ಉತ್ತಮ ಕಾರ್ಯಕ್ರಮಗಳನ್ನು ನಾವು ಹಾಕಿಕೊಳ್ಳಲಿದ್ದೇವೆ ಎಂದರು.
ಈ ಸಂದರ್ಭ ಪರಿಸರ ಕಾಳಜಿಯ ಕಾರ್ಯಕ್ರಮವನ್ನು ರೂಪಿಸುತ್ತಿರುವ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಹಿರಿಯ ರೈತ ಚಿತ್ರಪಾಡಿ ಸಂಜೀವ ಪೂಜಾರಿಯವರನ್ನು ಸಮ್ಮಾನಿಸಲಾಯಿತು. ಗೀತಾನಂದ ಫೌಂಡೇಶನ್ ಮೂಲಕ ಸಮಾಜ ಸೇವೆಗೈಯುತ್ತಿರುವ ಆನಂದ ಸಿ.ಕುಂದರ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿ ವೇತನ, ಆರೋಗ್ಯ ನಿಧಿ, ಸಹಾಯಧನ ಹಸ್ತಾಂತರಿಸಲಾಯಿತು.
ವಲಯ ಪ್ರತಿನಿಧಿ ಮಂಜುನಾಥ ಕಾಂಚನ್, ವಲಯ ತರಬೇತುದಾರ ಗಜೇಂದ್ರ ಶೆಟ್ಟಿ, 2022ನೇ ಸಾಲಿನ ಅಧ್ಯಕ್ಷ ಅರುಣ ಕುಂದರ್ ಹಾಗೂ ಮಾಜಿ ಕಾರ್ಯದರ್ಶಿ ಯೋಗೀಶ್ ಕುಮಾರ್ ಉಪಸ್ಥಿತರಿದ್ದರು.
ರೋಟರಿ ಸದಸ್ಯ ನಾಗರಾಜ್ ನಾೈರಿ ಸ್ವಾಗತಿಸಿ, ರಾಜೇಂದ್ರ ಸುವರ್ಣ, ಶ್ರೀಕಾಂತ್ ಶೆಣೈ, ಗಣೇಶ್ ಹೊಳ್ಳ, ಮಾಧವ ಪೂಜಾರಿ ಅತಿಥಿಗಳನ್ನು ಪರಿಚಯಸಿದರು. ಕ್ಲಬ್‍ನ ಮಾಜಿ ಅಧ್ಯಕ್ಷ ಉಮೇಶ್ ಪ್ರಭು, ಕಾರ್ಯಕ್ರಮ ನಿರೂಪಿದರು.












