ಕುಂದಾಪುರ ಮಿರರ್ ಸುದ್ದಿ…
ಕೋಟ: ಗಿಳಿಯಾರು ಯುವಕ ಮಂಡಲ ಗಿಳಿಯಾರು ಇದರ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶೇಖರ್ ಜಿ ಗರಡಿಮಕ್ಕಿ ಆಯ್ಕೆಯಾಗಿದರು. ಭಾನುವಾರ ಅಲ್ಸೆಕೆರೆ ಮಹಾಲಿಂಗೇಶ್ವರನ ದೇವಸ್ಥಾನ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರು ಸುಭಾಷ್ ಪೂಜಾರಿ ಕಾರ್ಯದರ್ಶಿ ಅಕ್ಷಯ್ ಸೋಮಯಾಜಿ ,ಜೊತೆ ಕಾರ್ಯದರ್ಶಿ ರಾಘವೇಂದ್ರ ಆಚಾರ್ಯ ,ಕೋಶಾಧಿಕಾರಿಯಾಗಿ ನಂದೀಶ್ ಹೇರಳೆ ,ಜೊತೆ ಕೋಶಾಧಿಕಾರಿಯಾಗಿ ನಯನ ಗಿಳಿಯಾರು ಆಯ್ಕೆಯಾದರು.ಸಭೆಯ ಅಧ್ಯಕ್ಷತೆಯನ್ನು ಹಾಲಿ ಅಧ್ಯಕ್ಷ ರಾಮಚಂದ್ರ ಆಚಾರ್ಯ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರ್,ಮಾಜಿ ಅಧ್ಯಕ್ಷರಾದ ಯೋಗಾನಂದ ಶೆಟ್ಟಿ ಮತ್ತಿತರರು ಸದಸ್ಯರು ಇದ್ದರು.











