ಇತರ ಸಮಾಜಕ್ಕೆ ಮಾದರಿ ಸಮುದಾಯವಾಗಿ ಗಾಣಿಗ ಸಮುದಾಯ ರೂಪುಗೊಂಡಿದೆ – ಸೂರ್ಯನಾರಾಯಣ ಗಾಣಿಗ
ಕುಂದಾಪುರ ಮಿರರ್ ಸುದ್ದಿ…
ಕೋಟ: ಗಾಣಿಗ ಯುವಸಂಘಟನೆ ಕೋಟ ಘಟಕ ಮತ್ತು ಮಹಿಳಾ ಸಂಘಟನೆ ಆಶ್ರಯದಲ್ಲಿ, ಸಾಧಕ ವಿದ್ಯಾರ್ಥಿಗಳಿಗೆ ಸಮ್ಮಾನ, ಶೈಕ್ಷಣಿಕ ಪರಿಕರ ವಿತರಣೆ ಕಾರ್ಯಕ್ರಮ ಯುವಸಂಗಮ ಜು.2ರಂದು ಕಾರ್ತತಟ್ಟು ಅಘೋರೇಶ್ವರ ಸಭಾಭವನದಲ್ಲಿ ಜರಗಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘಟನೆಯ ಅಧ್ಯಕ್ಷ ಸೂರ್ಯನಾರಾಯಣ ಗಾಣಿಗ ಮಟಪಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಬೆಳವಣಿಗೆಯಲ್ಲಿ ಶಿಕ್ಷಣ ಅತೀ ಅಗತ್ಯ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಹೆತ್ತವರ ಕರ್ತವ್ಯವಾಗಿದೆ. ಯುವ ಸಾಧಕರನ್ನು ಗುರುತಿಸಿ ಸಮ್ಮಾನಿಸುವ ಕೋಟ ಯುವಸಂಘಟನೆಯ ಕಾರ್ಯ ಶ್ಲಾಘನೀಯ ಎಂದರಲ್ಲದೆ ಗಾಣಿಗ ಸಮುದಾಯ ಇತರ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಮುಖ್ಯ ಶಿಕ್ಷಕ ಗಣೇಶ್ ಜಿ. ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದರು.
ಸಂಘಟನೆಯ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ ಸಭಾಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕ್ರೀಡಾವಿಭಾಗದಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ ಸೌಜನ್ ಕುಮಾರ್ ಸಾಲಿಗ್ರಾಮ, ದಿನೇಶ್ ಗಾಣಿಗ ಕೋಟ ಹಾಗೂ ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಗಣೇಶ್ ಗಾಣಿಗ ಚಿತ್ರಪಾಡಿ ಅವರನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿ, ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಕೊಡೆ, ವಾಟರ್‍ಬಾಟಲ್‍ಗಳನ್ನು ವಿತರಿಸಲಾಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿತು.
ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಂಘಟನೆಯ ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಗಾಣಿಗ ಯುವ ಸಂಘಟನೆ ಕೋಟದ ಗೌರವಾಧ್ಯಕ್ಷ ಪ್ರಶಾಂತ್ ಗಾಣಿಗ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಗಣೇಶ್ ಚಿತ್ರಪಾಡಿ, ಯುವ ಸಂಘಟನೆ ಬಾರ್ಕೂರು ಅಧ್ಯಕ್ಷ ಬಾಲಕೃಷ್ಣ ಗಾಣಿಗ, ಗಾಣಿಗ ಸಮಾಜದ ವಿವಿಧ ವಲಯಗಳ ಅಧ್ಯಕ್ಷರುಗಳಾದ ಬ್ರಹ್ಮಾವರದ ಉದಯ ಕುಮಾರ್, ಉದ್ಯಾವರದ ಚಂದ್ರಶೇಖರ್ ಗಾಣಿಗ, ಬಾರ್ಕೂರಿನ ಬಾಲಕೃಷ್ಣ ಗಾಣಿಗ, ಕೆಮ್ಮಣ್ಣಿನ ಸತೀಶ್ ಕೆಮ್ಮಣ್ಣು, ತೆಂಕನೆಡಿಯೂರಿನ ಶಂಕರ ಗಾಣಿಗ, ಉಡುಪಿ ವಲಯದ ಜಯರಾಮ ಗಾಣಿಗ ಉಪಸ್ಥಿತರಿದ್ದರು.
ಯುವ ಸಂಘಟನೆಯ ಖಜಾಂಚಿ ಆನಂದ ಗಾಣಿಗ ಮಾಬುಕಳ ಸ್ವಾಗತಿಸಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗಾಣಿಗ ಪ್ತಾಸ್ತಾವಿಕ ಮಾತನಾಡಿದರು. ಮಹಿಳಾ ಸಂಘದ ಕಾರ್ಯದರ್ಶಿ ಕಲಾ ನಟರಾಜ ಗಾಣಿಗ ಮಾಬುಕಳ, ಖಜಾಂಚಿ ಶಾರದಾ ದಿನೇಶ್ ಗಾಣಿಗ ಸಾಧಕರನ್ನು ಪರಿಚಯಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ರಾಜೇಶ್ ಗಾಣಿಗ, ವಿಶ್ವನಾಥ ಗಾಣಿಗ ಬೆಟ್ಲಕ್ಕಿ ಕಾರ್ಯಕ್ರಮ ನಿರೂಪಿಸಿ, ಸಂಘಟನೆಯ ಕಾರ್ಯದರ್ಶಿ ಆರ್.ಕೆ. ಬ್ರಹ್ಮಾವರ ವಂದಿಸಿದರು.











