ಕುಂದಾಪುರ ಮಿರರ್ ಸುದ್ದಿ…
ಕೋಟ: ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ನಿಧನರಾದ ಕಾವಡಿ ನಿವಾಸಿ ನಾಗೇಶ್ ಆಚಾರ್ಯ ಅವರ ಮನೆಗೆ ಅವರು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕಂಪನಿಯ ಸಿಬ್ಬಂದಿಗಳು ತಮ್ಮ ಸಂಬಳದಲ್ಲಿ ಮೃತ ಕುಟುಂಬದವರಿಗೆ 1,30,000/- ನಗದನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಗಣೇಶ್ ಕರ್ಕೇರ, ರಮೇಶ್ ಆಚಾರ್ಯ, ಸುದರ್ಶನ್ ನಾಯ್ಕ್, ಸುರೇಂದ್ರ ಶೆಟ್ಟಿ, ಲೋಹಿತ್ ಹೆಗ್ಡೆ, ಸದಾಶಿವ ಮತ್ತು ಮಹೇಶ್ ಉಪಸ್ಥಿತರಿದ್ದರು.











