ಸಿಎ ಇಂಟರ್ಮೀಡಿಯೇಟ್ ಪರೀಕ್ಷೆ : ವೈಷ್ಣವಿಗೆ 29ನೇ ರ್ಯಾಂಕ್

0
557

Click Here

Click Here

ಕುಂದಾಪುರ ಮಿರರ್ ಸುದ್ದಿ
ಕುಂದಾಪುರ:
ಶಿಕ್ಷ ಪ್ರಭಾ ಅಕಾಡೆಮಿ ಆಫ್ ಕಾಮರ್ಸ್ ಎಜುಕೇಶನ್ ಸಿಎ/ಸಿಎಸ್/ ಸಿಎಮ್ಎ ಮತ್ತು ಬ್ಯಾಂಕಿಂಗ್ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ಸಂಸ್ಥೆಯ ವಿದ್ಯಾರ್ಥಿನಿ ವೈಷ್ಣವಿ ಅವರು 543 ಅಂಕ ಗಳಿಸುವುದರೊಂದಿಗೆ ಅಖಿಲ ಭಾರತಕ್ಕೆ 29ನೇ ರ್ಯಾಂಕ್ ಗಳಿಸಿದ್ದಾರೆ.


ಸಂಸ್ಥೆಯ ವಿದ್ಯಾರ್ಥಿಗಳಾದ ರಕ್ಷಿತ್ ಶೆಟ್ಟಿ 246, ಸಿಂಚನ ಶೆಟ್ಟಿ 239, ಸುದರ್ಶನ್ ಅಡಿಗ 232, ಸುಚಿನ್ ಕುಮಾರ್ ಶೆಟ್ಟಿ 228, ಗಣೇಶ್ ಮಧ್ಯಸ್ಥ 213, ಅಖಿಲ ಹೆಬ್ಬಾರ್ 210, ಸಹನಾ 206, ಆಯೆಷ ತುಬಾ 203, ಭೂಮಿಕ 202, ಮೈತ್ರಿ 201 ಹೊಸ ಪಠ್ಯಕ್ರಮದ ಇಂಟರ್ಮೀಡಿಯೇಟ್ ಪರೀಕ್ಷೆ ಉತ್ತೀರ್ಣರಾದರೆ, ರಕ್ಷಿತ್ ಶೆಟ್ಟಿ 246, ರೋಹನ್ 178, ಮೇಘರಾಜ್ 150, ಹಳೆ ಪಠ್ಯಕ್ರಮದ ಇಂಟರ್ಮೀಡಿಯೇಟ್ ಪರೀಕ್ಷೆಯನ್ನು ಉತ್ತೀರ್ಣರಾಗಿದ್ದಾರೆ.

Click Here

ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ಅಖಿಲ ಭಾರತ ಮಟ್ಟದಲ್ಲಿ ಫೌಂಡೇಶನ್ ಪರೀಕ್ಷೆ ಇಂಟರ್ಮೀಡಿಯೇಟ್ ಪರೀಕ್ಷೆ ಮತ್ತು ಫೈನಲ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದು ಪ್ರೊಫೆಷನಲ್ ಕೋರ್ಸ್ಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿರುವ ಶಿಕ್ಷ ಪ್ರಭ ಸಂಸ್ಥೆಯ ಸಾಧನೆಗೆ ಉತ್ತಮ ಬೋಧಕ ಸಿಬ್ಬಂದಿಗಳು ಸಂಸ್ಥೆಯ ಆಧುನಿಕ ಶಿಕ್ಷಣ ಪದ್ಧತಿಯ ಜೊತೆಗೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಕಾರಣ ಎಂದು ಸಂಸ್ಥೆಯ ಮುಖ್ಯಸ್ಥರಾದ ಪ್ರತಾಪ್ ಚಂದ್ರ ಶೆಟ್ಟಿ ಮತ್ತು ಭರತ್ ಶೆಟ್ಟಿ ಹೇಳಿದ್ದಾರೆ.

Click Here

LEAVE A REPLY

Please enter your comment!
Please enter your name here