ಕುಂದಾಪ್ರ ಭಾಷೆಯ ದಾಖಲೀಕರಣಕ್ಕೆ ಹೆಚ್ಚಿನ ಮಹತ್ವ ಅಗತ್ಯ- ಪೂರ್ಣಿಮಾ

0
227

Click Here

Click Here

ಕುಂದಾಪುರ ಮಿರರ್ ‌ಸುದ್ದಿ…

ಕೋಟ : ಭಾಷೆಗಳ ಬೆಳವಣಿಗೆಗೆ ದಾಖಲೀಕರಣ ಅತೀ ಅಗತ್ಯ, ಕುಂದಾಪ್ರ ಭಾಷೆ ಇನ್ನಷ್ಟೂ ಸಮೃದ್ಧವಾಗಿ ಬೆಳೆಯಲು ಹಾಗೂ ಅಧ್ಯಯನ ದೃಷ್ಠಿಯಿಂದ ಅಕ್ಷರ ರೂಪಕ್ಕೆ ತರುವ ಪ್ರಯತ್ನ ಇನ್ನಷ್ಟೂ ಆಗಬೇಕಾಗಿದೆ, ಕುಂದಾಪ್ರ ಭಾಷೆಯ ಸಾಹಿತ್ಯ ಸಮ್ಮೇಳನದಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳಲಿ ಎಂದು ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು ಹೇಳಿದರು.

ಅವರು ಕೋಟದ ಡಾ.| ಶಿವರಾಮ ಕಾರಂತ ಥೀಮ್ ಪಾರ್ಕ್‍ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಜೆಸಿಐ ಕಲ್ಯಾಣಪುರದ ಆಶ್ರಯದಲ್ಲಿ ನಡೆದ ವಿಶ್ವ ಕುಂದಾಪ್ರ ದಿನಾಚರಣೆ ಅಂಗವಾಗಿ ಕುಂದಾಪ್ರ ಕನ್ನಡ ಉತ್ಸವ ಹೊಸ ಹೂಂಗು ಕೋಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Click Here

ಕನ್ನಡ ಸಾಹಿತ್ಯ ಪರಿಷತ್ತಿನ ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಐತಾಳ್ ಮಾತನಾಡಿ ಕುಂದಾಪ್ರ ಭಾಷೆಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೇ ಹೆಚ್ಚಾಗಿ ಬಳಸಬೇಕು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಜೆಸಿಐ ಕಲ್ಯಾಣಪುರ ಜ್ಯೂನಿಯರ್ ಜೆಸಿಐ ಅಧ್ಯಕ್ಷ ನಿರಂತರ, ಸಾಂಸ್ಕøತಿಕ ಚಿಂತಕರಾದ ಸುಮನ ಹೇರ್ಳೆ, ರವೀಂದ್ರ ಶೆಟ್ಟಿ ತಂತ್ರಾಡಿ, ಚೇಂಪಿ ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಸ್ತಾಪಿಸಿ, ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here