ಕುಂದಾಪುರದ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಮಣಿಪುರ ಘಟನೆ ಖಂಡಿಸಿ ಪ್ರತಿಭಟನೆ

0
1062

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಶಾಂತಿ, ಅಹಿಂಸೆಯ ಮೂಲಕ ಈ ದೇಶ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ. ಸೌಹಾರ್ದ, ಶಾಂತಿ, ಸಾಮರಸ್ಯವಾಗಿ ಜನತೆ ಇಲ್ಲಿ ಬದುಕುತ್ತಿದ್ದಾರೆ. ಆದರೆ ಇಂದು ನಮ್ಮ ನಡುವೆ ಅಶಾಂತಿಯನ್ನು ಉಂಟು ಮಾಡುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ. ಮಣಿಪುರದಲ್ಲಿ ನಡೆದ ಘಟನೆ ದೇಶವೇ ತಲೆ ತಗ್ಗಿಸುವಂತಾಹದ್ದು. ಮೇ 4ರಂದು ನಡೆದ ಈ ಘಟನೆಯ ವಿಡಿಯೋಗಳು ಹೊರ ಬಂದಿದ್ದು ಮೊನ್ನೆಯಷ್ಟೆ. ಈ ಘಟನೆಯ ನಡೆದ ಮಾಹಿತಿ ಸ್ಥಳೀಯ ಪೊಲೀಸ್, ಸರ್ಕಾರಕ್ಕೆ ಗೊತ್ತಿದ್ದರೂ ಆಗ ಕ್ರಮ ಕೈಗೊಳ್ಳಲಿಲ್ಲ ಏಕೆ? ಕೇಂದ್ರ ಸರ್ಕಾರ ಈ ಬಗ್ಗೆ ಮೌನ ವಹಿಸಿದ್ದು ಏಕೆ? ಎಂದು ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿ ಪ್ರಶ್ನಿಸಿದರು.

Click Here

ಅವರು ಕುಂದಾಪುರದ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸಹಬಾಳ್ವೆ ಕುಂದಾಪುರ, ದಸಂಸ ತಾಲೂಕು ಘಟಕ ಕುಂದಾಪುರ, ಸಮುದಾಯ ಕುಂದಾಪುರ ಮೊದಲಾದ ಸಂಘಟನೆಗಳ ನೇತೃತ್ವದಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಸೋಮವಾರ ಸಂಜೆ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮಣಿಪುರದ ಬುಡಕಟ್ಟು ಜನಾಂಗವೊಂದರ ಮೇಲೆ ಕೌರ್ಯ ನಡೆದಿದೆ. ಮಹಿಳೆಯರನ್ನು ದೇವರು ಎನ್ನುವ ಬಿಜೆಪಿ ನೇತೃತ್ವದ ಸರ್ಕಾರ, ಪರಿವಾರ ಈ ಘಟನೆಯ ಬಗ್ಗೆ ಕಠಿಣ ನಿಲುವುಗಳನ್ನು ತಳೆಯದಿರುವುದರ ಹಿಂದೆ ಆನೇಕ ಕಾರಣಗಳು ಇವೆ. ಮಣಿಪುರ ಘರ್ಷಣೆಯಲ್ಲಿ 5ಸಾವಿರಕ್ಕೂ ಹೆಚ್ಚು ಮನೆಗಳನ್ನು ಸುಟ್ಟು ಹಾಕಿದರು. 25ಕ್ಕೂ ಹೆಚ್ಚು ಚರ್ಚ್‍ಗಳಿಗೆ ಹಾನಿಯಾಗಿದೆ. ಸರ್ಕಾರಗಳ ವೈಫಲ್ಯ ಇಲ್ಲಿ ಸ್ಪಷ್ಟವಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಕ್ಯಾಂಡಲ್ ಬೆಳಗಲಾಯಿತು. ಪ್ರತಿಭಟನೆಯಲ್ಲಿ ಜುಡಿತ್ ಮೆಂಡೋನ್ಸಾ, ರಫೀಕ್ ಗಂಗೊಳ್ಳಿ, ಮಂಜು ಕಾಳಾವರ, ವಿನೋದ್ ಕ್ರಾಸ್ತಾ , ವಿಕಾಸ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here