ಉಡುಪಿ ಶಾಸಕರ ಸೊಸೈಟಿ ಸಿಬ್ಬಂದಿ ಸಾವಿನ ಮರು ತನಿಖೆಗೆ ಕಾಂಗ್ರೆಸ್ ಆಗ್ರಹ

0
325

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕರ್ನಾಟಕದ ಗೃಹಸಚಿವರ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರ ಸೊಸೈಟಿಯಲ್ಲಿ ನಡೆದ ದಲಿತನ ಸಾವಿನ ಬಗ್ಗೆ ಮರು ತನಿಖೆ ನಡೆಸಬೇಕು ಎಂದು ಬೈಂದೂರು ಕಾಂಗ್ರೆಸ್ ಆಗ್ರಹಿಸಿದೆ.

Click Here

ವಂಡ್ಸೆ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಭಾನುವಾರ ವಂಡ್ಸೆಯಲ್ಲಿ ನಡೆದ ಪ್ರತಿಭಟನೆಯ ಸಂದರ್ರಭ ಮಾತನಾಡಿದ ಮಾಜೀ ಶಾಸಕ ಕೆ ಗೋಪಾಲ ಪೂಜಾರಿ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಕಾಪಾಡಬೇಕಾದ ಜವಾಬ್ಧಾರಿಯುತ ಸ್ಥಾನದಲ್ಲಿರುವ ಉಡುಪಿ ಶಾಸಕ ಯಶಪಾಲ ಸುವರ್ಣ ತನ್ನ ಜವಾಬ್ಧಾರಿ ಮರೆತು ಗೃಹಮಂತ್ರಿಗಳ ಬಗ್ಗೆ ಮಾತನಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಯಶಪಾಲ್ ಸುವರ್ಣ ಅವರ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಿಬ್ಬಂದಿಯ ಸಾವಿನ ಪ್ರಕರಣದ ಮರುತನಿಖೆ ಮಾಡಿದಾಗ ನಿಜ ತಿಳಿಯುತ್ತದೆ ಎಂದು ಹರಿಹಾಯ್ದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಕಾನೂನು ಸುವ್ಯವಸ್ಥೆ ಬಲಿಷ್ಟವಾಗಿದೆ ಎಂದ ಅವರು ಉಡುಪಿ ಪ್ರಕರಣ ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿದೆ. ಆದರೆ ಶಾಸಕ ಯಶ್ಪಾಲ್ ಸುವರ್ಣರೇ ನೀವು ಮಾತನಾಡುವ ಮುನ್ನ ನಿಮ್ಮ ಮಹಾಲಕ್ಷ್ಮೀ ಕೊಪರೇಟಿವ್ ಸೊಸೈಟಿಯಲ್ಲಿ ನಡೆದ ನಿಮ್ಮದೇ ಸಿಬ್ಬಂದಿಯಾದ ದಲಿತ ಅಧಿಕಾರಿಯ ಸಾವಿಗೆ ಮೊದಲು ನ್ಯಾಯ ಕೊಡಿಸಿ. ಇಲ್ಲವೇ ಸರ್ಕಾರವೇ ಮರು ತನಿಖೆ ನಡೆಸುತ್ತದೆ ಎಂದು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ ಗುಡುಬೆಟ್ಟು ಎಚ್ಚರಿಸಿದ್ದಾರೆ.

Click Here

LEAVE A REPLY

Please enter your comment!
Please enter your name here