ಕುಂದಾಪುರ ಮಿರರ್ ಸುದ್ದಿ…
ಗಂಗೊಳ್ಳಿ : ಗಂಗೊಳ್ಳಿಯ ಸೇವಾ ಸಂಗಮ ನಿವೇದಿತಾ ಶಿಶು ಮಂದಿರದ ಅಧ್ಯಕ್ಷರಾಗಿ ಪತ್ರಕರ್ತ ಬಿ.ರಾಘವೇಂದ್ರ ಪೈ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಅಶ್ವಿತಾ ಜಿ.ಪೈ, ಜತೆ ಕಾರ್ಯದರ್ಶಿಯಾಗಿ ವಸಂತಿ ಎನ್.ಖಾರ್ವಿ, ಸಂಚಾಲಕ/ಖಜಾಂಚಿಯಾಗಿ ಡಾ.ಕಾಶೀನಾಥ ಪಿ.ಪೈ ಆಯ್ಕೆಯಾಗಿದ್ದಾರೆ. ಶಿಶು ಮಂದಿರದಲ್ಲಿ ಗುರುವಾರ ಶಿಶು ಮಂದಿರದ ಅಧ್ಯಕ್ಷೆ ಸವಿತಾ ಯು.ದೇವಾಡಿಗ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸೇವಾ ಸಂಗಮ ಟ್ರಸ್ಟ್‍ನ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಟ್ರಸ್ಟಿ ಚಂದ್ರಿಕಾ ಧನ್ಯ, ಶಿಶು ಮಂದಿರದ ಸದಸ್ಯರು ಉಪಸ್ಥಿತರಿದ್ದರು.











