ಕುಂದಾಪುರ :ಸರಕಾರಿ ಬಸ್ಸಿಗಾಗಿ ಆಲೂರು ವಿದ್ಯಾರ್ಥಿಗಳಿಂದ ಪ್ರತಿಭಟನೆ

0
409

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಆಲೂರು ಗ್ರಾಮದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಸುಮಾರು 22 ಕಿಮೀ ದೂರದಲ್ಲಿರುವ ಕುಂದಾಪುರಕ್ಕೆ ದಿನನಿತ್ಯ ಪ್ರಯಾಣಿಸುತ್ತಿದ್ದಾರೆ. ಕೆಲವೇ ಕೆಲವು ಖಾಸಗೀ ಬಸ್ಸುಗಳಿದ್ದರೂ ಕಾಲೇಜು ಬಿಡುವ ಸಮಯದಲ್ಲಿ ರಷ್ ನಿಂದ ಸಂಜೆ ಬಸ್ ತಪ್ಪಿದ್ದಲ್ಲಿ ವಿದ್ಯಾರ್ಥಿಗಳು ಮನೆಗೆ ಬರುವಾಗ ರಾತ್ರಿ ಆಗುತ್ತಿರುವುದು ಮನೆಯ ಪೋಷಕರಿಗೆ ಭಯದಿಂದ ಬದುಕುವಂತಾಗಿದೆ. ಆದುದರಿಂದ ಸರಕಾರಿ ಬಸ್ಸಿಗೆ ಕೊಲ್ಲೂರು-ಆಲೂರು-ಕುಂದಾಪುರ ಸಂಪರ್ಕಿಸುವ ರೂಟ್ ಪರವಾನಿಗೆ ನೀಡಿ ಬಸ್ ಓಡಿಸಲು ಜಿಲ್ಲಾ ಸಾರಿಗೆ ಪ್ರಾಧಿಕಾರ ಮುಂದಾಗಬೇಕು ಎಂದು ವಿದ್ಯಾರ್ಥಿ ಗಳು ಆಗ್ರಹಿಸಿದರು.

Click Here

ಅಲ್ಲದೇ ಆಲೂರಿನಲ್ಲಿ ಸರಕಾರಿ ಕಾಲೇಜು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಆದರ್ಶ, ಪೂರ್ಣೇಶ, ಸುರಕ್ಷಾ,ಸಾನ್ವಿ, ಸಾಕ್ಷಿ, ಶ್ರಾವ್ಯ,ದೀಕ್ಷಾ ಇದ್ದರು.

ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಕಲ್ಲಾಗರ, ಉಪಾಧ್ಯಕ್ಷ ಚಂದ್ರಶೇಖರ ವಿ,ರವಿ ವಿಎಂ,ಆಲೂರು ಘಟಕದ ಅಧ್ಯಕ್ಷ ರಘುರಾಮ ಆಚಾರ್ ಮೊದಲಾದವರಿದ್ದರು

Click Here

LEAVE A REPLY

Please enter your comment!
Please enter your name here