ಕುಂದಾಪುರ ಮಿರರ್ ಸುದ್ದಿ…
ಕೋಟ: ಸ್ನೇಹ ಸಂಜೀವಿನಿ ಒಕ್ಕೂಟ ಪಾಂಡೇಶ್ವರ ಇದರ ವಾರ್ಷಿಕ ಮಹಾಸಭೆಯು ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿಗೆ ಜರಗಿತು.
ಸ್ನೇಹ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮಾವರ ತಾಲೂಕಿನ ಬಿಇಆರ್‍ಇಪಿ ಅನಿತಾ ಸ್ವ ಉದ್ಯೋಗದ ಮೂಲಕ ತಯಾರಿಸುವ ಉತ್ಪನ್ನಗಳಿಗೆ ಸಂಜೀವಿನಿ ಸಂತೆ ಹಾಗೂ ಸಂಜೀವಿನಿ ಸೂಪರ್ ಮಾರ್ಕೆಟ್ ಇರುವುದರ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಜೀವಿನಿ ನೂಡಲ್ ಅಧಿಕಾರಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಇವರನ್ನು ಗೌರವಿಸಲಾಯಿತು.
ಒಕ್ಕೂಟದ ಕಾರ್ಯದರ್ಶಿ ಕವಿತಾ ವಾರ್ಷಿಕ ವರದಿ ಮಂಡಿಸಿದರು. ಒಕ್ಕೂಟದ ಎಂಬಿಕೆ ಉಷಾ ಗಣೇಶ್ ವಾರ್ಷಿಕ ಆಯವ್ಯಯ ಮಂಡಿಸಿದರು. ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು,ಎಂಬಿಕೆ,ಎಲ್‍ಸಿಆರ್‍ಪಿ ,ಕೃಷಿ ಪಶುಸಕಿ ಸಖಿ ಸಂಜೀವಿನಿ ಸದಸ್ಯರು ಉಪಸ್ಥಿತರಿದ್ದರು.











