ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟ ಗ್ರಾಮಪಂಚಾಯತ್ ಎರಡನೆ ಅವಧಿಗೆ ನೂತನ ಅಧ್ಯಕ್ಷರಾಗಿ ಜ್ಯೋತಿ ಬಿ ಶೆಟ್ಟಿ , ಉಪಾಧ್ಯಕ್ಷರಾಗಿ ಜಿ.ಎನ್ ಪಾಂಡು ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.
25ಸದಸ್ಯ ಬಲದ ಕೋಟ ಗ್ರಾಮಪಂಚಾಯತ್‍ನಲ್ಲಿ ಬಿಜೆಪಿ ಬೆಂಬಲಿತ 23, ಕಾಂಗ್ರೆಸ್ ಬೆಂಬಲಿತ 2ಸದಸ್ಯರನ್ನು ಹೊಂದಿದೆ.
ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬ್ರಹ್ಮಾವರ ಬೋರ್ಡ್ ಹೈಸ್ಕೂಲ್ ಉಪಪ್ರಾಂಶುಪಾಲೆ ಉಮಾ ಬಿ. ಪಾಲ್ಗೊಂಡರು.
ಕೋಟ ಗ್ರಾಮಪಂಚಾಯತ್ ನಿರ್ಗಮಿತ ಅಧ್ಯಕ್ಷ ಅಜಿತ್ ದೇವಾಡಿಗ ಹಾಗೂ ಉಪಾಧ್ಯಕ್ಷೆ ಜಯಂತಿ ಪೂಜಾರಿ ನೂತನವಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಉಪಾಧ್ಯಕ್ಷರುಗಳಿಗೆ ಅಧಿಕಾರ ಹಸ್ತಾಂತರಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರ್ವಹಿಸಿದರು.ಪಂಚಾಯತ್ ಲೆಕ್ಕಪರಿಶೋಧಕಿ ಪೂರ್ಣಿಮಾ ಅಧಿಕಾರಿ ವಂದಿಸಿದರು.











