ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕಟ್‌ಬೆಲ್ತೂರು ಗ್ರಾ.ಪಂ. ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ವೈಶಾಲಿ ಅವಿರೋಧವಾಗಿ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
೧೩ ಸದಸ್ಯ ಬಲದ ಪಂಚಾಯತ್‌ನಲ್ಲಿ ೮ ಮಂದಿ ಬಿಜೆಪಿ ಬೆಂಬಲಿತ ಹಾಗೂ ಐವರು ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು.
ಉಪಾಧ್ಯಕ್ಷ ಸ್ಥಾನ ಪೈಪೋಟಿ
ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರೀ ಪೈಪೋಟಿ ಏರ್ಪಟಿದ್ದು, ಬಿಜೆಪಿ ಬೆಂಬಲಿತ ರಾಮ ಶೆಟ್ಟಿ ಹಾಗೂ ಕಾಂಗ್ರೆಸ್ ಬೆಂಬಲಿತ ಶರತ್ ಕುಮಾರ್ ಶೆಟ್ಟಿ ಸ್ಪರ್ಧಿಸಿದ್ದರು. ಈ ಪೈಕಿ ರಾಮ ಶೆಟ್ಟರಿಗೆ ೭ ಮತ ಹಾಗೂ ಶರತ್ ಶೆಟ್ಟರಿಗೆ ೬ ಮತಗಳು ಬಿದ್ದವು. ಅಂತಿಮವಾಗಿ ರಾಮ ಶೆಟ್ಟರು ವಿಜಯಿಯಾದರು. ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಗೂ ಮೊದಲು ಇಬ್ಬರು ಬಿಜೆಪಿ ಬೆಂಬಲಿತರನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಮತದಾನದ ವೇಳೆ ಇದೇ ಉಲ್ಟಾ ಹೊಡೆದಿದ್ದು, ತನ್ನವರೊಬ್ಬರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಅಡ್ಡ ಮತದಾನ ಮಾಡಿದ್ದು, ಇದು ಕೊನೆಗೆ ಆಣೆ ಪ್ರಮಾಣಕ್ಕೂ ಕಾರಣವಾಯಿತು ಎನ್ನಲಾಗಿದೆ.
ಚುನಾವಣಾಧಿಕಾರಿಯಾಗಿ ವಾರಾಹಿ ಎಂಜಿನಿಯರ್ ಎಂ.ಜಿ. ಭಟ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಗ್ರಾ.ಪಂ. ಪಿಡಿಒ ರಿಯಾಜ್ ಅಹಮದ್ ಸಹಕರಿಸಿದರು.











