ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ‌ಗಿರೀಶ್ ಎಸ್. ನಾಯ್ಕ್ ಆಯ್ಕೆ

0
452

Click Here

Click Here

ಕುಂದಾಪುರ ಮಿರರ್ ಸುದ್ದಿ…

Click Here

ಕುಂದಾಪುರ : ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಈವರೆಗೆ ಉಪಾಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಗಿರೀಶ್ ಎಸ್. ನಾಯ್ಕ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಚಂದ್ರಮತಿ ಡಿ. ಹೆಗ್ಡೆ ಆಯ್ಕೆಯಾಗಿದ್ದಾರೆ.

೧೬ ಸದಸ್ಯ ಬಲದ ಪಂಚಾಯತ್‌ನಲ್ಲಿ ೫ ಬಿಜೆಪಿ ಬೆಂಬಲಿತರು, ೪ ಕಾಂಗ್ರೆಸ್ ಬೆಂಬಲಿತರು ಹಾಗೂ ೭ ಪಕ್ಷೇತರ ಸದಸ್ಯರಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಗಿರೀಶ್ ನಾಯ್ಕ್ ಹಾಗೂ ಪಕ್ಷೇತರ ಸಂಜೀವ ದೇವಾಡಿಗ ಸ್ಪರ್ಧಿಸಿದ್ದರು. ಗಿರೀಶ್ ಅವರಿಗೆ ೮ ಹಾಗೂ ಸಂಜೀವ ಅವರಿಗೆ ೭ ಮತಗಳು ಬಿದ್ದವು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಚಂದ್ರಮತಿ ಹಾಗೂ ಪಕ್ಷೇತರ ಸದಸ್ಯೆ ರುಕ್ಮಿಣಿ ಸ್ಪರ್ದಿಸಿದ್ದರು. ಈ ಪೈಕಿ ೮ ಮತ ಪಡೆದ ಚಂದ್ರಮತಿ ಉಪಾಧ್ಯಕ್ಷೆಯಾಗಿ ಆಯ್ಕೆಯಾದರೆ, ರುಕ್ಮಿಣಿ ಅವರಿಗೆ ೭ ಮತಗಳು ಸಿಕ್ಕವು. ಒಬ್ಬರು ಸದಸ್ಯರು ಗೈರಾಗಿದ್ದರು.
ಚುನಾವಣಾಧಿಕಾರಿಯಾಗಿ ಕ್ಷೇತ್ರ ಶೋಭಾ ಶೆಟ್ಟಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಪಿಡಿಒ ನಾಗರತ್ನ ಸಹಕರಿಸಿದರು.

Click Here

LEAVE A REPLY

Please enter your comment!
Please enter your name here