ಕುಂದಾಪುರ ಮಿರರ್ ಸುದ್ದಿ.

ಕುಂದಾಪುರ: ಗುಣಮಟ್ಟದ ಸೇವೆಯ ಮೂಲಕ ಹೆಸರಾಗಿರುವ ಉಡುಪಿಯ ಗಿರಿಜಾ ಗ್ರೂಪ್ಸ್ ಅವರ ಫಿಸಿಯೋಕೇರ್ ಸೆಂಟರ್ನ ನೂತನ ಶಾಖೆ ಕುಂದಾಪುರದ ಅಥರ್ವ ಕಾಂಪ್ಲೆಕ್ಸ್ ನಲ್ಲಿ ಶನಿವಾರ ಶುಭಾರಂಭಗೊಂಡಿತು.
ಕುಂದಪ್ರಭ ಸಂಪಾದಕ ಯು. ಎಸ್. ಶೆಣೈ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಜೀವನ ಪದ್ದತಿಯ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ್ದು ಅಗತ್ಯವಾಗಿದೆ. ಫಿಸಿಯೋಥೆರಫಿ ಅಗತ್ಯ ಇಂದಿನ ದಿನದಲ್ಲಿ ಹೆಚ್ಚಿದ್ದು, ಈ ಚಿಕಿತ್ಸೆಯ ಮೂಲಕ ಚೇತರಿಸಿಕೊಂಡ ನೂರಾರು ಉದಾಹರಣೆಗಳಿದೆ. ಈ ಸೇವೆಯನ್ನು ಮನೆ ಮನೆ ವಿಸ್ತರಿಸುವಂತಾಗದೇ ಹತ್ತಾರು ಮಂದಿ ರೋಗಿಗಳು ಪೂರ್ಣ ಪ್ರಮಾಣದಲ್ಲಿ ಇದರ ಪ್ರಯೋಜನೆ ಪಡೆದುಕೊಂಡಂತಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಐಎಂಎ ಕುಂದಾಪುರದ ಅಧ್ಯಕ್ಷ ಡಾ. ಮಹೇಶ್ ಗಂಗೊಳ್ಲಿ, ಡಾ. ಎ.ವಿ. ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ಕುಂದಾಪುರದ ಜಯಕರ ಶೆಟ್ಟಿ, ಅಮಾಸೆಬೈಲು ಆಯುಷ್ ಆಸ್ಪತ್ರೆಯ ಡಾ. ಹೇಮಲತಾ ಉಪಸ್ಥಿತರಿದ್ದರು.
ಗಿರಿಜಾ ಗ್ರೂಪ್ನ ಪ್ರವರ್ತಕ ರವೀಂದ್ರ ಶೆಟ್ಟಿ ಸ್ವಾಗತಿಸಿದರು. ಫಿಸಿಯೋಥೆರೆಪಿಸ್ಟ್ ಡಾ. ದೀಪಾ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ವೇಳೆ ಸುರೇಖಾ ರವೀಂದ್ರ ಶೆಟ್ಟಿ ಹಾಗೂ ಹರೀಶ್ ಕುಮಾರ್ ಉಪಸ್ಥಿತರಿದ್ದರು. ಪತ್ರಕರ್ತ ಅವಿನಾಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಗಿರಿಜಾ ಹೆಲ್ತ್ಕೇರ್ ಮತ್ತು ಸರ್ಜಿಕಲ್ಸ್ ಮೂಲಕ ಕುಂದಾಪುರದಲ್ಲಿ ಉತ್ತಮ ಸೇವೆ ನೀಡುತ್ತಿರುವ ಗಿರಿಜಾ ಗ್ರೂಪ್ನ ಪಿಸಿಯೋಕೇರ್, ಪಿಸಿಯೋಥೆರಪಿ ಹಾಗೂ ರಿಹ್ಯಾಬಿಲಿಟೆಷನ್ ಸೆಂಟರ್ ಆಗಿದ್ದು, ಅಲ್ಪ ಕಾಲದ ಹಾಗೂ ಧೀರ್ಘ ಕಾಲದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಉತ್ತಮ ಆಯ್ಕೆಯಾಗಿದೆ. ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ.











