ಬೆಂಗಳೂರು ಮುರ್ಡೇಶ್ವರ ರೈಲಿಗೆ ಅವೈಜ್ಞಾನಿಕ ವೇಳಾಪಟ್ಟಿ : ಹಿತರಕ್ಷಣಾ ವೇದಿಕೆ ಆಕ್ರೋಶ

0
615

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇತ್ತೀಚೆಗೆ ಮುರುಡೇಶ್ವರದ ವರೆಗೆ ವಿಸ್ತರಣೆಗೊಂಡ ಬೆಂಗಳೂರು ಮೈಸೂರು ಮಂಗಳೂರು ಮುರ್ಡೇಶ್ವರ (16585) ರೈಲಿನ ವೇಳಾಪಟ್ಟಿಯ ವಿರುದ್ಧ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Click Here

ಮಂಗಳೂರಿನಿಂದ ಸುರತ್ಕಲ್ ಗೆ ಕೇವಲ 20 ಕಿ ಮಿ ದೂರವಿದೆ. ಆದರೆ, ಈ ರೈಲು ಮಂಗಳೂರಿಗೆ 8.15ಕ್ಕೆ ಬಂದರೆ 11 ಘಂಟೆಗೆ ಸುರತ್ಕಲ್ ಗೆ ಬರುವ ಮೂಲಕ ಬರೋಬ್ಬರಿ ಮೂರೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಮತ್ಸಗಂಧಾ ಎಕ್ಸ್ ಪ್ರೆಸ್ ರೈಲು 2ಗಂಟೆ ಅವಧಿಯಲ್ಲಿ ಮಂಗಳೂರಿನಿಂದ ಕುಂದಾಪುರಕ್ಕೆ ಬರುತ್ತದೆ. ಆದರೆ ಈ ರೈಲಿಗೆ ಮೂರು ಗಂಟೆ ತಗಲುತ್ತಿದೆ. ನೈರುತ್ಯ ರೈಲ್ವೆಯಿಂದ ಮೊದಲಿಗಿಂತಲೂ ಅರ್ಧ ಘಂಟೆ ಬೇಗನೆ ಪಡೆದು ಕೊಂಕಣ ರೈಲ್ವೇಗೆ ಮಾತ್ರ ವಿಳಂಭವಾಗಿ ರೈಲನ್ನು ಹಸ್ತಾಂತರಿಸುವುದರಿಂದ ಕೇರಳದ ಲಾಬಿಗೆ ದಕ್ಷಿಣ ರೈಲ್ವೆ ಮಣಿದಿದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ಇಲಾಖೆ ಈ ಬಗ್ಗೆ ಸರಿಯಾದ ವೇಳಾ ಪಟ್ಟಿ ಸಿದ್ಧಪಡಿಸಿದರೆ ಈ ರೈಲನ್ನು ಗೋಕರ್ಣ, ಕಾರವಾರ ದ ವರೆಗೂ ವಿಸ್ತರಿಸಬಹುದು. ಮೈಸೂರು, ಉಡುಪಿ, ಆನೆಗುಡ್ಡೆ, ಹಟ್ಟಿಅಂಗಡಿ ವಿನಾಯಕ, ಕೊಲ್ಲೂರು, ಇಡಗುಂಜಿ, ಗೋಕರ್ಣಕ್ಕೆ ಅನುಕೂಲವಾಗುವ ವೇಳಾ ಪಟ್ಟಿ ತಯಾರಿಸಿ ಅನುಕೂಲ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ಉಳಿದ ರೈಲುಗಳ ಸಂಚಾರದ ಅವಧಿಯಷ್ಟೇ ಈ ರೈಲಿಗೂ ಅನ್ವಯ ಆಗುವ ವೇಳಾಪಟ್ಟಿ ತಯಾರಿಸಿ ಅನುಕೂಲ ಮಾಡಬೇಕು ಎಂದು ಗಣೇಶ್ ಪುತ್ರನ್ ಅಗ್ರಹಿಸಿದ್ದಾರೆ.

Click Here

LEAVE A REPLY

Please enter your comment!
Please enter your name here