ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಸಹಕಾರಿ ಸಂಸ್ಥೆಗಳ ಬಗ್ಗೆ ಜನರು ಒಲವು ತೋರಿಸುತ್ತಿದ್ದಾರೆ. ಅದಕ್ಕೆ ಬಹುಮುಖ್ಯ ಕಾರಣ ರಾಷ್ಟ್ರೀಕೃತ ಬ್ಯಾಂಕುಗಳ ಸಿಬ್ಬಂದಿಗಳಿಗೆ ಇರುವ ಭಾಷಾ ಸಮಸ್ಯೆ. ಈ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಗುರುವಾರ ನಗರದ ಇಲ್ಲಿನ ವಿಕ್ರಮ್ ಸ್ಕ್ಯಾನಿಂಗ್ ಸೆಂಟರ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಲೋಕಾರ್ಪಣೆಗೊಂಡ ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಸೇವಾ ಸಹಕಾರಿ ಸಂಘ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕಿನಷ್ಟೇ ಪ್ರಬಲವಾಗಿ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಘವು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದನ್ನು ಆದ್ಯತೆ ಆಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕುಂದಾಪುರ ಉಪಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್‍ಕುಮಾರ್ ಭದ್ರತಾ ಕೋಶ, ದಲಿತ ದೌರ್ಜನ್ಯ ಪ್ರಕರಣಗಳ ಸರಕಾರಿ ವಿಶೇಷ ಅಭಿಯೋಜಕ ಸತೀಶ್ಚಂದ್ರ ಕಾಳಾವರ್ಕರ್ ಗಣಕಯಂತ್ರ ಉದ್ಘಾಟಿಸಿದರು. ಕಟ್ಟಡದ ಮಾಲೀಕ ಡಾ.ರಾಘವೇಂದ್ರ ಉಪಾಧ್ಯ ಠೇವಣಿ ಪತ್ರ ಬಿಡುಗಡೆಗೊಳಿಸಿದರು. ಗಿರಿಜಾ ಟ್ರೇಡರ್ಸ್ ಮಾಲೀಕ ಬಿ.ವೆಂಕಟೇಶ್ ಶೇರುಗಾರ್ ನಗದು ಉದ್ಘಾಟಿಸಿದರು. ವಿಘ್ನೇಶ್ವರ ಪಾಲಿ ಪ್ರಾಡಕ್ಟ್ ಮಾಲೀಕ, ಸಂಘದ ಉಪಾಧ್ಯಕ್ಷ ಕೆ. ಪ್ರಕಾಶ್ ಬೆಟ್ಟಿನ್ ಸಾಲ ಡಿಡಿ ವಿತರಿಸಿದರು. ಸಂಘದ ಅಧ್ಯಕ್ಷ ಎಚ್.ಶಂಕರ ಶೇರುಗಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕರಾದ ರಾಜೇಶ ಕಾವೇರಿ, ಶರತ್‍ಕುಮಾರ್ ಕೆ.ಸಿ., ಚಂದ್ರಶೇಖರ ಬಿ.ಎಂ., ದಯಾನಂದ ಗಾಣಿಗ, ಕೆ.ಎಸ್.ಸಂತೋಷಕುಮಾರ್, ಅರುಣಕುಮಾರಿ, ಪೂರ್ಣಿಮಾ ಭವಾನಿಶಂಕರ್, ಜಯಲಕ್ಷ್ಮೀ ಎಂ.ವಿ., ಕೆ.ಉಮೇಶ್ ಮಧ್ಯಸ್ಥ, ಕೆ.ವಿ.ಭಾಸ್ಕರ್, ಉದ್ಯಮಿ ಸತೀಶ್ ಕಾವೇರಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಶಲಿತಾ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ನಾಯ್ಕ್ ಸ್ವಾಗತಿಸಿದರು. ನ್ಯಾಯವಾದಿ ರಾಘವೇಂದ್ರ ಚರಣ್ ನಾವಡ ಕಾರ್ಯಕ್ರಮ ನಿರ್ವಹಿಸಿದರು.











