ನಾಡೋಜ ಡಾ. ಜಿ.ಶಂಕರ್ 68ನೇ ಹುಟ್ಟುಹಬ್ಬ ಆಚರಣೆ
ಕುಂದಾಪುರ: ನಾಡೋಜ ಡಾ.ಜಿ ಶಂಕರ್ ಸಮಾಜ ಕಟ್ಟುವ ಹಾಗೂ ಕಳಕಳಿಯುಳ್ಳ ಕಾಯಕಜೀವಿ ಅವರ ಜನ್ಮದಿನಾಚರಣೆ ಅರ್ಥಪೂರ್ಣ ಆಚರಣೆಯಾಗಿಸಿರುವುದು ಶ್ಲಾಘನೀಯ ಎಂದು ಕೋಟದ ಧರ್ಮರತ್ನಾಕರ ಆನಂದ್ ಸಿ ಕುಂದರ್ ಹೇಳಿದರು.
ಕೋಟ ಮೊಗವೀರ ಯುವ ಸಂಘದ ಆಶ್ರಯದಲ್ಲಿ ನಾಡೋಜ ಡಾ.ಜಿ ಶಂಕರ್‍ರವರ 68ನೇ ಜನ್ಮದಿನೋತ್ಸವದ ಹಿನ್ನಲ್ಲೆಯಲ್ಲಿ ಕೋಟದ ಗುಳ್ಳಾಡಿ ವಿಠ್ಠಲ ಪ್ರಭು ಅನಾಥಾಶ್ರಮದಲ್ಲಿ ಹಣ್ಣು ಹಂಪಲು ವಿತರಿಸಿ ಮಾತನಾಡಿ ಸದಾ ಸಮಾಜದ ಬಗ್ಗೆ ತುಡಿತ ಹೊಂದಿದ ನಾಡೋಜ ಜಿ.ಶಂಕರ್‍ರವರು ಹತ್ತು ಹಲವು ಕಾರ್ಯಗಳನ್ನು ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. ಆರೋಗ್ಯ ಕಾರ್ಡ ಯೋಜನೆ, ಸಾಮೂಹಿಕ ವಿವಾಹ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಜನಮನ ವಿಡಿಯುವಂತ್ತದ್ದು ಅಂತಹ ವ್ಯಕ್ತಿಯ ಜನ್ಮದಿನೋತ್ಸವ ಸಮುದಾಯ ಸಂಘಟನೆ ಅನಾಥಾಶ್ರಮದಲ್ಲಿ ಕಳೆಯುವ ಕಾರ್ಯ ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ ಕೇಕ್ ಕತ್ತರಿಸಿ ನಾಡೋಜರಿಗೆ ಶುಭಾಶಯಗಳನ್ನು ಸಲ್ಲಿಸಲಾಯಿತು.
ಕೋಟ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ಅಧ್ಯಕ್ಷತೆ ವಹಿಸಿ ವಂದಿಸಿದರು.
ಮೊಗವೀಯ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ, ಪ್ರಧಾನ ಕಾರ್ಯದರ್ಶಿ ರವೀಶ್ ಶ್ರೀಯಾನ್ ಕೊರವಾಡಿ, ನಿಕಟ ಪೂರ್ವ ಅಧ್ಯಕ್ಷ ಶಿವಾರಾಮ ಕೆ ಎಮ್, ಮಾಜಿ ಜಿಲ್ಲಾಧ್ಯಕ್ಷ ಸಂಜೀವ್ ಎಮ್ ಎಸ್, ಜಿಲ್ಲಾ ಘಟಕದ ಪ್ರಮುಖರಾದ ಕೃಷ್ಣಮೂರ್ತಿ ಮರಕಾಲ,ಮಾಜಿ ಅಧ್ಯಕ್ಷ ರಮೇಶ್ ವಿ ಕುಂದರ್, ಜಿಲ್ಲಾ ಉಪಾಧ್ಯಕ್ಷ ಜಯಂತ್ ಕೋಡಿ , ಅಶೋಕ್ ತೆಕ್ಕಟ್ಟೆ ,ಗುಲಾಬಿ ದೇವಾದಾಸ್ ಬಂಗೇರ ಮಹಿಳಾ ಅಧ್ಯಕ್ಷ ಲಲಿತಾ ಪಡುಕರೆ ಪದಾಧಿಕಾರಿಗಳಾದ ದೇವಾದಾಸ ಕಾಂಚನ್ , ರಾಮ ಬಂಗೇರ , ಮಹೇಶ್ ಕಂಬಳಗದ್ದೆ , ಸಂತೋಷ ಮಣೂರು , ಅಭಿಜಿತ್ ಕಾಂಚನ್ ಬಾರಿಕೆರೆ, ಸುಮತಿ ಪಡುಕರೆ ,ನಂದಿನಿ ಗಿಳಿಯಾರು ಜಿಲ್ಲಾ ಸಮಿತಿ ಸದಸ್ಯರು ಮತ್ತು ಕೋಟ ಘಟಕ ಪದಾಧಿಕಾರಿಗಳು ಮತ್ತು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಪ್ರವೀಣ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು.











