ಕುಂದಾಪುರ ಮಿರರ್ ಸುದ್ದಿ…
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನಕ್ಕೆ ಕರ್ನಾಟಕ ಕೃಷಿ ಮತ್ತು ತೋಟಗಾರಿಕೆ ಸಚಿವ ಚೆಲುವರಾಯ ಸ್ವಾಮಿಯವರ ಪತ್ನಿ ಧನಲಕ್ಷ್ಮಿಯವರು ಭೇಟಿ ನೀಡಿ ದೇವರ ದರ್ಶನ ಪಡೆದು, ಅಷ್ಟೋತ್ತರ ನಾಮಾವಳಿ ಅರ್ಚನೆಯನ್ನು ಸಲ್ಲಿಸಿದರು.
ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಕ್ಷೇತ್ರದ ವತಿಯಿಂದ ಪ್ರಸಾದವನ್ನು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಪೂರ್ವಾಧ್ಯಕ್ಷ ಎ.ಜಗದೀಶ ಕಾರಂತ, ಪ್ರಬಂಧಕ ನಾಗರಾಜ ಹಂದೆ , ರಾಜ್ಯ ಕೃಷಿ ಇಲಾಖೆಯ ಕುಂದಾಪುರ ವಿಭಾಗದ ಉನ್ನತಾಧಿಕಾರಿ ರೂಪ ಮಾಡ ,ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಪರುಶರಾಮ್ ಭಟ್ ಮತ್ತಿತರರು ಉಪಸ್ಥಿತರಿದ್ದರು.











