ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ಶರನ್ನವರಾತ್ರಿ ಅಂಗವಾಗಿ ಎರಡನೇ ದಿನದ ಪೂಜಾ ವಿಧಿ ವಿಧಾನಗಳು ವೈಭವದಿಂದ ಜರಗಿತು.
ಎರಡನೆ ದಿನದ ಪೂಜಾ ಸೇವಾಕರ್ತರಾಗಿ ವಾಸು ಕರ್ಕೇರ ಮತ್ತು ಮಕ್ಕಳು, ಮೂಕಾಂಬಿಕಾ’ ಕೋಡಿ ಹೊಸಬೆಂಗ್ರೆ, ಪ್ರಕಾಶ್ ಶೆಟ್ಟಿ ಹೋಟೆಲ್ ಶ್ರೀ ರೇಣುಕಾದರ್ಶಿನಿ ಹಾವೇರಿ ದುರ್ಗಾಹೋಮ, ಅನ್ನಸಂತರ್ಪಣೆ ಕಾರ್ಯದಲ್ಲಿ ಭಾಗಿಯಾದರು.
ಧಾರ್ಮಿಕ ವಿಧಿವಿಧಾನಗಳನ್ನು ವೇ.ಮೂ ಮಧುಸೂದನ ಬಾಯರಿ ನೇತ್ರತ್ವದಲ್ಲಿ ನಡೆಯಿತು.
ಶ್ರೀ ದೇವಳದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್ ,ಸದಸ್ಯರಾದ ಸತೀಶ್ ಹೆಗ್ಡೆ,ಚಂದ್ರ ಪೂಜಾರಿ,ಸುಬ್ರಾಯ ಆಚಾರ್ಯ ,ಕೋಟ ಗ್ರಾ.ಪಂ ಸದಸ್ಯ ಚಂದ್ರ ಆಚಾರ್,ದೇವಳದ ಮ್ಯಾನೇಜರ್ ಗಣೇಶ್ ಹೊಳ್ಳ ಇದ್ದರು.ಶರನ್ನವರಾತ್ರಿ ಅಂಗವಾಗಿ ನೂರಾರು ಭಕ್ತರು ದೇವಿಯ ದರ್ಶನ ಪಡೆದರು.ಶ್ರೀದೇವಿ ಮಹಾಗೌರಿ ರೀತಿಯಲ್ಲಿ ಶೃಂಗರಿಸಲಾಗಿತ್ತು.ದೇಗುಲದ ಅರ್ಚಕ ದಾಮೋದರ ಜೋಗಿ,ಗಿರೀಶ್ ಜೋಗಿ,ದೀಕ್ಷಿತ್ ಜೋಗಿ ಮತ್ತಿತರರು ದೇವಿಯ ಪೂಜಾ ಕಾರ್ಯದಲ್ಲಿ ಭಾಗಿಯಾದರು.ಸಂಜೆ ಪಂಚವರ್ಣ ಮಹಿಳಾ ಮಂಡಳ ಭಜನಾ ತಂಡ, ಕೋಟ ಇವರಿಂದ ಭಜನಾ ಕಾರ್ಯಕ್ರಮ,ರಾತ್ರಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಇಲ್ಲಿನ ಕಲಾವಿದರಿಂದ ಭೀಷ್ಮಪರ್ವ ಯಕ್ಷಗಾನ ಪ್ರದರ್ಶನಗೊಂಡಿತು.











