ಕುಂದಾಪುರ ಮಿರರ್ ಸುದ್ದಿ…
ಕೋಟ: ಗಿರಿಫ್ರೆಂಡ್ಸ್ ಚಿತ್ರಪಾಡಿ ಸಾಲಿಗ್ರಾಮ ಇವರ ಆಶ್ರಯದಲ್ಲಿ ಭಾನುವಾರದಂದು ಚಿತ್ರಪಾಡಿ ಶಾಲೆಯ ಸಭಾಂಗಣದಲ್ಲಿ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ನಿರ್ಮಲ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.
2022-23 ರ ಸಾಲಿನ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಇವರನ್ನು ಸನ್ಮಾನಿಸಲಾಯಿತು.
ಎಸ್‍ಎಸ್‍ಎಲ್‍ಸಿಯಲ್ಲಿ 80 ಶೇಕಡಕ್ಕಿಂತ ಹೆಚ್ಚು ಅಂಕಗಳಿಸಿದ ಸ್ಥಳೀಯ 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಲಾಯಿತು. ಚಿತ್ರಪಾಡಿ ಶಾಲೆಯ ಖೋ ಖೋ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ನಿವೃತ್ತ ಮುಖ್ಯ ಶಿಕ್ಷಕ ಪಿ. ಶ್ರೀಪತಿ ಹೇರ್ಳೆ ಪಾರಂಪಳ್ಳಿ ಹಾಗೂ ಸ.ಹಿ. ಪ್ರಾ. ಶಾಲೆ ಚಿತ್ರಪಾಡಿಯ ಮುಖ್ಯ ಶಿಕ್ಷಕಿ ಶಾಲಿನಿ,ಲೆಕ್ಕಪರಿಶೋಧಕ ಮಾಧವ ಪೈ ಉಪಸ್ಥಿತರಿದ್ದರು.
ಗಿರಿ ಫ್ರೆಂಡ್ಸ್ ಅಧ್ಯಕ್ಷ ಮಂಜುನಾಥ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಸತ್ಯನಾರಾಯಣ ನಾಯರಿ ಯವರು ಪ್ರಾಸ್ತಾವಿಕ ಮಾತನ್ನಾಡಿದರು. ಗೌರವಾಧ್ಯಕ್ಷರಾದ ದಿನೇಶ್ ಆಚಾರ್ಯ ಸ್ವಾಗತಿಸಿದರು, ರಾಮ ನಾಯರಿ ಪ್ರಾರ್ಥನೆಗೈದರು, ಸವಿತಾ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಆಚಾರ್ಯ ವಂದಿಸಿದರು.











