ಗುಳ್ಳಾಡಿ ಶಾರದೋತ್ಸವದಲ್ಲಿ ಸಮಾಜಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಸನ್ಮಾನ

0
461

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಬೇಳೂರಿನ ಗುಳ್ಳಾಡಿಯಲ್ಲಿ ನಡೆದ 12ನೇ ವರ್ಷದ ಶಾರದೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮ ಮಂಗಳವಾರ ಸಂಪನ್ನಗೊಂಡಿತು. ಈ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜಸೇವಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿ ಉಪಕಾರ ಬಯಸದ ಸೇವೆಯ ಅಗತ್ಯತೆ ಮತ್ತು ಯುವಕರಲ್ಲಿನ ಸಾಮಾಜಿಕ ಕಳಕಳಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಸ್ಫೂರ್ತಿ ತುಂಬಿದರು.

ಕಾರ್ಯಕ್ರಮವನ್ನು ಬೇಳೂರು ಗ್ರಾಮ ಪಂಚಾಯತ್‍ನ ಅಧ್ಯಕ್ಷ ಜಯಶೀಲ ಶೆಟ್ಟಿ ಉದ್ಘಾಟಿಸಿದರು.

Click Here

ಮುಖ್ಯ ಅತಿಥಿಗಳಾಗಿ ಅಮೃತೇಶ್ವರಿ ರೈಸ್‍ಮಿಲ್ ಗಿಳಿಯಾರು ಗುಳ್ಳಾಡಿ ಇದರ ಮಾಲೀಕ ಮಹೇಶ್ ಶೆಟ್ಟಿ,ಬೇಳೂರು ಗ್ರಾಮ ಪಂಚಾಯತ್ ಸದಸ್ಯೆ ಮುಕ್ತಾ ರಾಘವೇಂದ್ರ, ಶ್ರೀಕಲಾ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಸುಧೀರ್ ಗುಳ್ಳಾಡಿ ವಹಿಸಿದ್ದರು.

ಸಂಧ್ಯಾ, ದೀಪ್ತಿ ಪ್ರಾರ್ಥಿಸಿದರು, ಕಾರ್ಯಕ್ರಮವನ್ನು ಉಪನ್ಯಾಸಕ ನಾಗರಾಜ್ ಗುಳ್ಳಾಡಿ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here