ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರಾದ ನರೇಂದ್ರ ಕುಮಾರ್ ಕೋಟರವರಿಗೆ ಅವರ ಶೈಕ್ಷಣಿಕ ಚಲನಚಿತ್ರ ಸುಗಂಧಿ ನಿರ್ಮಾಣಕ್ಕಾಗಿ ಮಂಗಳೂರಿನ ಕಥಾ ಬಿಂದುವಿನ ಚೈತನ್ಯಶ್ರೀ ವಿಶೇಷ ರಾಜ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಕಾರಂತರು ಹಾಗೂ ಯಕ್ಷಗಾನವನ್ನು ಸಮನ್ವಯಗೊಳಿಸುವ ಈ ಚಲನಚಿತ್ರ ಕಲಾತ್ಮಕ ಬೆರಗಿನೊಂದಿಗೆ ನಿರ್ಮಾಣವಾಗಿರುವುದು ಶ್ಲಾಘನೀಯ ವಿಚಾರವೆಂದು ಸಂಸ್ಥೆ ತಿಳಿಸಿದೆ.
ಇತ್ತೀಚಿಗಷ್ಟೇ ಕರ್ನಾಟಕ ಸರಕಾರದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕನಕಪೀಠದ ಸಾರ್ವಭೌಮ ಪುರಸ್ಕಾರ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.











